ಮುಳಬಾಗಿಲು: ನಗರದ ಶಿವಕೇಶವ ನಗರದಲ್ಲಿರುವ ಉದ್ಭವ ಶಿವಲಿಂಗೇಶ್ವರ ದೇವರ ರಥೋತ್ಸವದ ಪ್ರಯುಕ್ತ ಸೋಮವಾರ ದೇವಾಲಯದ ಆವರಣದಲ್ಲಿ ಶಿವಪಾರ್ವತಿಯರ ಕಲ್ಯಾಣೋತ್ಸವ ನಡೆಯಿತು.
ಸಾವಿರಾರು ವರ್ಷಗಳ ಇತಿಹಾಸ ಇರುವ ಪುರಾಣ ಪ್ರಸಿದ್ಧ ಉದ್ಭವ ಶಿವಲಿಂಗೇಶ್ವರ ಸ್ವಾಮಿಯ 17ನೇ ಬ್ರಹ್ಮರಥೋತ್ಸವ ಮಂಗಳವಾರ ನಡೆಯಲಿದ್ದು, ಅದಕ್ಕೂ ಮುನ್ನಾದಿನ ದೇವಾಲಯದಲ್ಲಿ ದೇವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಿ ಪೂಜೆ ಸಲ್ಲಿಸಲಾಯಿತು. ನಂತರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕಲ್ಯಾಣೋತ್ಸವ ನಡೆಯಿತು.
ಕಲ್ಯಾಣೋತ್ಸವ ಪ್ರಯುಕ್ತ ದೇವರುಗಳ ಮೂರ್ತಿಗಳನ್ನು ದೇವಾಲಯ ಮುಂಭಾಗದ ಆವರಣದಲ್ಲಿ ಇಟ್ಟು ಅತ್ಯಾಕರ್ಷಕವಾದ ಹೂಗಳಿಂದ ಅಲಂಕಾರ ಮಾಡಿ ಅರ್ಚಕರು ಕಾರ್ಯಕ್ರಮ ನಡೆಸಿಕೊಟ್ಟರು. ಹೋಮ, ಅಗ್ನಿಕುಂಡ, ಧ್ವಜಾರೋಹಣ, ಅಭಿಷೇಕ, ಮಹಾ ಮಂಗಳಾರತಿ , ತೀರ್ಥ ಪ್ರಸಾದ ವಿನಿಯೋಗ ಮತ್ತಿತರ ಕಾರ್ಯಕ್ರಮಗಳು ನಡೆದವು.
ಉದ್ಭವ ಶಿವಲಿಂಗೇಶ್ವರ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ರವಿಕುಮಾರ್, ಕಾವೇರಿ ನಾರಾಯಣ ಸ್ವಾಮಿ, ಸಿ.ವಿ.ಗೋಪಾಲ್, ನಾಗರಾಜಾಚಾರಿ, ವೈ.ಶಂಭಯ್ಯ, ಕೀಲಾಗಾಣಿ ಮಂಜುನಾಥ ಸ್ವಾಮಿ, ಯಲ್ಲಪ್ಪ, ಹಾಗೂ ಶ್ರೀ ವರಸಿದ್ದಿ ವಿನಾಯಕ ಸೇವಾ ಟ್ರಸ್ಟಿನ ಎಲ್ಲಾ ಸದಸ್ಯರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.