ಕೆಜಿಎಫ್: ರಾಬರ್ಟಸನ್‌ಪೇಟೆ ಬಸ್ ನಿಲ್ದಾಣದಲ್ಲಿ ಅಸಮರ್ಪಕ ಕಸ ವಿಲೇವಾರಿಯಿಂದಾಗಿ ಬಸ್ ನಿಲ್ದಾಣದ ವರ್ತಕರು ಮತ್ತು ಪ್ರಯಾಣಿಕರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ರಾಬರ್ಟಸನ್‌ಪೇಟೆ ಬಸ್ ನಿಲ್ದಾಣದಲ್ಲಿ ಖಾಸಗಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸುತ್ತವೆ. ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಇಂತಹ ಬಸ್ ನಿಲ್ದಾಣವನ್ನು ಸ್ವಚ್ಛ ಮತ್ತು ಸುಂದರವಾಗಿಡುವ ಬದಲು ದುರ್ವಾಸನೆಯಿಂದ ಕೂಡಿದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ ನಿಲ್ದಾಣದಲ್ಲಿ ಸ್ವಚ್ಛತೆ ಕಾಪಾಡಿಕೊಂಡು ಬರಬೇಕೆಂದು ನಗರಸಭೆ ಈಚೆಗೆ ಬಸ್ ನಿಲ್ದಾಣದ ವರ್ತಕರಿಗೆ ನೋಟಿಸ್ ನೀಡಿತ್ತು. ಕಸವನ್ನು ನಿಗದಿತ ಜಾಗದಲ್ಲಿ ಇಡಬೇಕು. ನಗರಸಭೆಯ ತ್ಯಾಜ್ಯ ವಿಲೇವಾರಿ ಮಾಡುವ ವಾಹನದಲ್ಲಿಯೇ ಹಾಕಬೇಕು ಎಂದು ಸೂಚನೆ ನೀಡಲಾಗಿತ್ತು. ಬಸ್ ನಿಲ್ದಾಣದಲ್ಲಿರುವ ಮದ್ಯದ ಅಂಗಡಿಗಳಿಗಾಗಿ ವಿಶೇಷವಾಗಿ ಒಂದು ಆಟೊ ಕಳಿಸಲಾಗುತ್ತಿತ್ತು. ಆದರೆ, ಕೆಲ ವರ್ತಕರು ಸೂಚನೆಯನ್ನು ಪಾಲಿಸದೆ, ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದಾರೆ. ಬಸ್ ನಿಲ್ದಾಣಕ್ಕಾಗಿಯೇ ನಾಲ್ವರು ಪೌರ ಕಾರ್ಮಿಕರನ್ನು ಆಯೋಜಿಸಲಾಗಿದೆ ಎಂದು ನಗರಸಭೆ ಆಯುಕ್ತ ಆಂಜನೇಯಲು ಹೇಳುತ್ತಾರೆ.
ಬಸ್ ನಿಲ್ದಾಣದಲ್ಲಿ ಬೆಳಗ್ಗೆ ಪೌರಕಾರ್ಮಿಕರು ಕಸ ಸ್ವಚ್ಛ ಮಾಡುತ್ತಾರೆ. ಅದನ್ನು ತೆಗೆದುಕೊಂಡು ಹೋಗುವ ಬದಲು ಸಂಜೆವರೆಗೂ ಬಸ್ ನಿಲ್ದಾಣದ ಒಂದು ಜಾಗದಲ್ಲಿ ಗುಡ್ಡೆ ಮಾಡುತ್ತಾರೆ. ಸಂಜೆ ವೇಳೆಗೆ ಅದನ್ನು ತೆಗೆದುಕೊಂಡು ಹೋಗುತ್ತಾರೆ. ಅಕಸ್ಮಾತ್ ಮಳೆ ಬಂದರೆ ಅದು ಕೂಡ ಸ್ವಚ್ಛವಾಗುವುದಿಲ್ಲ ಎಂದು ಪ್ರಯಾಣಿಕರು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.