ADVERTISEMENT

ಇಂದು ಸಜೀವಿ ಮಣ್ಣು ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2021, 5:03 IST
Last Updated 5 ಡಿಸೆಂಬರ್ 2021, 5:03 IST

ಕೋಲಾರ: ವಿಶ್ವ ಮಣ್ಣು ದಿನದ ಅಂಗವಾಗಿ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಬೈರಕೂರು ಗ್ರಾಮ ಪಂಚಾಯಿತಿ ಹಾಗೂ ಕರ್ನಾಟಕ ಮಳೆ ಬೇಸಾಯ ವೇದಿಕೆ ಸಹಯೋಗದಲ್ಲಿ ಬೈರಕೂರು ಗ್ರಾಮದ ಶ್ರೀ ವೆಂಕಟೇಶ್ವರ ಬಾಲಕಿಯರ ಪ್ರೌಢಶಾಲೆ ಮೈದಾನದಲ್ಲಿ ಭಾನುವಾರ (ಡಿ.5) ಸಜೀವಿ ಮಣ್ಣು ದಿನಾಚರಣೆ ಹಮ್ಮಿಕೊಳ್ಳಲಾಗಿದೆ.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 2 ಗಂಟೆವರೆಗೆ ಕಾರ್ಯಕ್ರಮ ನಡೆಯಲಿದೆ. ಮಣ್ಣಿನ ಈಗಿನ ಸ್ಥಿತಿಗತಿಗೆ ಕಾರಣ, ‍ಪೌಷ್ಟಿಕ ಆಹಾರ ಭದ್ರತೆಗಾಗಿ ಸಜೀವಿ ಮಣ್ಣಿನ ಸಂರಕ್ಷಣೆಯ ಪ್ರಾಮುಖ್ಯತೆ, ಫಲವತ್ತ ಮಣ್ಣಿನ ನಿರ್ವಹಣೆ ಕುರಿತು ಜನರೊಂದಿಗೆ ಸಂವಾದ ನಡೆಯಲಿದೆ ಎಂದು ಬೈರಕೂರು ಗ್ರಾ.ಪಂ. ಪ್ರಕಟಣೆ ತಿಳಿಸಿದೆ.

ಶಾಲಾ, ಕಾಲೇಜು ವಿದ್ಯಾರ್ಥಿಗಳು, ರೈತರು, ಸರ್ಕಾರಿ ಇಲಾಖೆಗಳ ಅಧಿಕಾರಿಗಳು, ಮಣ್ಣು ವಿಜ್ಞಾನಿಗಳು, ಶಿಕ್ಷಣ ಸಂಸ್ಥೆಗಳು, ಜನಪದ ಕಲಾವಿದರು ಹಾಗೂ ಮಣ್ಣಿನ ಬಗ್ಗೆ ಕಾಳಜಿಯುಳ್ಳವರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.