ಕೋಲಾರ: ಜಿಲ್ಲೆಯಲ್ಲಿ ಸಕ್ರಿಯವಾಗಿರುವ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ಒದಗಿಸಲಾಗುತ್ತಿದೆ. ಯುವಕ ಸಂಘಗಳು ನೋಂದಣಿ ಕಾಯಿದೆಯಡಿ ನೋಂದಣಿಯಾಗಿರಬೇಕು, ಪ್ರಸಕ್ತ ಸಾಲಿಗೆ ನವೀಕರಣ ಹೊಂದಿರಬೇಕು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಲ್ಲಿ ಮಾನ್ಯತೆ ಇರಬೇಕು.
ಸಂಘವು ಕನಿಷ್ಠ 25 ಯುವಜನರನ್ನು ಸದಸ್ಯರನ್ನಾಗಿ ಹೊಂದಿರಬೇಕು. ಸಂಘದ ಸದಸ್ಯರು 18 ರಿಂದ 35 ವರ್ಷದೊಳಗಿರಬೇಕು. ಸಕ್ರಿಯವಾಗಿ ಯುವಜನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರಬೇಕು. ಒದಗಿಸುವ ಕ್ರೀಡಾಸಾಮಗ್ರಿಗಳನ್ನು ಯುವಕ ಸಂಘದ ಕ್ರೀಡಾ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ಮುಚ್ಚಳಿಕೆ ನೀಡತಕ್ಕದ್ದು.
ಜಿಲ್ಲೆಯ ಸಕ್ರಿಯ ಯುವ ಸಂಘಗಳು ಈ ಕಚೇರಿಗೆ ಅರ್ಜಿಯನ್ನು ಜುಲೈ 10ರೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ದೂ: 9845608598ಕ್ಕೆ ಸಂಪರ್ಕಿಸಬಹುದೆಂದು ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.