ADVERTISEMENT

ಯೋಗಿ ವೇಮನ ಕಂಚಿನ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 26 ಜುಲೈ 2025, 3:15 IST
Last Updated 26 ಜುಲೈ 2025, 3:15 IST
ಮಾಲೂರಿನಲ್ಲಿ ಗುರುವಾರ ರೆಡ್ಡಿ ಸಮುದಾಯದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾ ಸಮಿತಿಗೆ ಸಮುದಾಯದ ಹಿರಿಯರಾದ ಎಸ್.ಕೃಷ್ಣಾರೆಡ್ಡಿ, ಎ.ವಿ.ಪ್ರಸನ್ನ ಹಾಗೂ ಎಸ್.ಎನ್. ಬಾಬುರೆಡ್ಡಿ ಅವರನ್ನು ನೇಮಕ ಮಾಡಲಾಯಿತು
ಮಾಲೂರಿನಲ್ಲಿ ಗುರುವಾರ ರೆಡ್ಡಿ ಸಮುದಾಯದಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಜಿಲ್ಲಾ ಸಮಿತಿಗೆ ಸಮುದಾಯದ ಹಿರಿಯರಾದ ಎಸ್.ಕೃಷ್ಣಾರೆಡ್ಡಿ, ಎ.ವಿ.ಪ್ರಸನ್ನ ಹಾಗೂ ಎಸ್.ಎನ್. ಬಾಬುರೆಡ್ಡಿ ಅವರನ್ನು ನೇಮಕ ಮಾಡಲಾಯಿತು   

ಮಾಲೂರು: ಆಡು ಭಾಷೆಯಲ್ಲಿ ಪದ್ಯಗಳ ಮೂಲಕ ಸಾಮಾಜಿಕ ಅನಾಚಾರ, ಅಂಧಕಾರ, ಮೌಢ್ಯ ವಿರುದ್ಧ ಪದ್ಯಗಳನ್ನು ಕಟ್ಟಿ ಸಮಾಜದಲ್ಲಿ ನೈತಿಕ ಗುಣಗಳ ಅರಿವು ಮೂಡಿಸಿದ ದಾರ್ಶನಿಕ ಕವಿ ಯೋಗಿ ವೇಮನ ಅವರ ಕಂಚಿನ ಪುತ್ಥಳಿ ಅನಾವರಣ ಹಾಗೂ ಸುಸಜ್ಜಿತ ಭವನ ಶೀಘ್ರ ಶೀಘ್ರದಲ್ಲಿ ಜನಾರ್ಪಣೆ ಮಾಡಲು ತಾಲ್ಲೂಕು ರೆಡ್ಡಿಜನ ಸಂಘ ತೀರ್ಮಾನಿಸಿದೆ ಎಂದು ತಾಲೂಕು ಘಟಜದ ಅಧ್ಯಕ್ಷ ಎ.ರಾಮಸ್ವಾಮಿರೆಡ್ಡಿ ತಿಳಿಸಿದರು.

ಪಟ್ಟಣದಲ್ಲಿ ಗುರುವಾರ ರೆಡ್ಡಿ ಜನಾಂಗದ ವತಿಯಿಂದ ಹಮ್ಮಿಕೊಂಡಿದ್ದ ಸಮುದಾಯದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರೆಡ್ಡಿಜನ ಸಮುದಾಯದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿಗೆ ತಾಲ್ಲೂಕಿನಾದ್ಯಂತ ಮನೆ ಮನೆ ಗಣತಿ ಮಾಡಲಾಗುವುದು. ಸಮುದಾಯದ ಅಭಿವೃದ್ಧಿಗೆ ಪೂರಕ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಮಾಲೂರು ತಾಲ್ಲೂಕಿನಿಂದ ಜಿಲ್ಲಾ ಸಮಿತಿಗೆ ಸಮುದಾಯದ ಹಿರಿಯರಾದ ಎಸ್.ಕೃಷ್ಣಾರೆಡ್ಡಿ, ಎ.ವಿ.ಪ್ರಸನ್ನ ಹಾಗೂ ಎಸ್.ಎನ್.ಬಾಬುರೆಡ್ಡಿ ಅವರನ್ನು ನೇಮಕ ಮಾಡಲಾಯಿತು.

ADVERTISEMENT

ಸಂಘದ ಕಾರ್ಯದರ್ಶಿ ಎ.ಅಶ್ವತ್ಥರೆಡ್ಡಿ, ಖಜಾಂಚಿ ಎನ್.ಆನಂದರೆಡ್ಡಿ, ಕೋರ್ ಕಮಿಟಿ ಸದಸ್ಯರಾದ ಎ.ನಾಗರಾಜರೆಡ್ಡಿ, ಎಂ.ಎಸ್. ಪ್ರದೀಪ್ ರೆಡ್ಡಿ, ನಿರ್ದೇಶಕರಾದ ಎ.ಹನುಮಂತರೆಡ್ಡಿ, ಅಂಬರೇಶರೆಡ್ಡಿ, ಕೆ.ಎಂ.ಆನಂದರೆಡ್ಡಿ, ಬಿ.ಜಗ್ಗನ್ನಾಥರೆಡ್ಡಿ, ಚಂದ್ರಾರೆಡ್ಡಿ, ಅರಣಿಘಟ್ಟ ಮುನಿರೆಡ್ಡಿ, ಅಶೋಕ್, ಪಾಲಾಕ್ಷರೆಡ್ಡಿ, ವೇಣುಗೋಪಾಲ್ ರೆಡ್ಡಿ ಇನ್ನಿತರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.