ADVERTISEMENT

ಕೂರಿಗೆ ಪದ್ಧತಿ ಬಿತ್ತನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 7:30 IST
Last Updated 22 ಡಿಸೆಂಬರ್ 2017, 7:30 IST

ಕಾರಟಗಿ: ತುಂಗಭದ್ರಾ ಜಲಾಶಯ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯಲ್ಲಿ ಸಾಂಪ್ರದಾಯಕ ಭತ್ತದ ನಾಡಿ ಮಾಡಲಾಗುತ್ತಿದೆ. ಅಧಿಕ ನೀರು ನಿಲ್ಲಿಸಿ, ಅಧಿಕ ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಸಿಂಪಡಿಸಲಾಗುತ್ತಿದೆ. ಇದರಿಂದ ಭೂಮಿಯ ಫಲವತ್ತತೆ ಹಾಳಾಗಿ, ಬೆಳೆಯ ಇಳುವರಿ ಕಡಿಮೆಯಾಗಲಿದೆ. ಭೂಮಿ ಬಂಜರಾಗುವ ಅಪಾಯವಿದೆ ಎಂದು ರಾಷ್ಟ್ರೀಯ ಆಹಾರ ಭದ್ರತೆ ಯೋಜನೆಯ ಜಿಲ್ಲಾ ಸಲಹೆಗಾರ ಎಸ್. ಬಿ. ಕೋಣೆ ಹೇಳಿದರು.

ಸಮೀಪದ ಮರ್ಲಾನಹಳ್ಳಿಯ ಶಿರಡಿ ಸಾಯಿಬಾಬ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಗುರುವಾರ ಕೃಷಿ ಇಲಾಖೆ ಹಾಗೂ ಕೃಷಿ ವಿಸ್ತರಣಾ ಕೇಂದ್ರದಿಂದ ಆಯೋಜಿಸಿದ್ದ ಕೂರಿಗೆ ಬಿತ್ತನೆಯ ಭತ್ತ ಬೆಳೆಯ ಕ್ಷೇತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರೈತರು ಕೂರಿಗೆ ಮೂಲಕ ಭತ್ತ ಬಿತ್ತನೆ ಮಾಡಿದರೆ ಕಡಿಮೆ ವೆಚ್ಚದಲ್ಲಿ, ಕಡಿಮೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕದಲ್ಲಿ ಅಧಿಕ ಇಳುವರಿ ಪಡೆದು, ದ್ವಿಗುಣ ಲಾಭ ಪಡೆಯಬಹುದಾಗಿದೆ. ಕಡಿಮೆ ಖರ್ಚಿನ ಸಿರಿಧಾನ್ಯ ಬೆಳೆಗಳನ್ನು, ಕೂರಿಗೆ ಬಿತ್ತನೆಯ ಭತ್ತ ಬೆಳೆದು ಮನುಷ್ಯರ ಆರೋಗ್ಯ ಕಾಪಾಡುವ ಜೊತೆಗೆ ಹೆಚ್ಚಿನ ಲಾಭ ಪಡೆಯಬಹುದು ಎಂದು ಅವರು ತಿಳಿಸಿದರು.

ADVERTISEMENT

ಸೂರ್ಯರೆಡ್ಡಿ ಅವರ ಜಮೀನಿನಲ್ಲಿ ಕೂರಿಗೆ ಬಿತ್ತನೆಯ ಭತ್ತದ ಬೆಳೆಯ ಪ್ರಾತ್ಯಕ್ಷಿಕೆಯನ್ನು ನೆರೆದ ರೈತರಿಗೆ ತೋರಿಸಲಾಯಿತು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ. ಪ್ರಕಾಶರಾವ್, ವಿಶೇಷ ಎಪಿಎಂಸಿ ಸದಸ್ಯ ಕೆ.ಶ್ರೀಹರಿ, ಕೃಷಿ ವಿಜ್ಞಾನಿಗಳಾದ ಡಾ.ಜಿ.ಎನ್.ಮರೆಡ್ಡಿ, ಡಾ.ರಾಘವೇಂದ್ರ ಎಲಿಗಾರ್, ತಾಂತ್ರಿಕ ಕೃಷಿ ಅಧಿಕಾರಿ ನಿಂಗಪ್ಪ, ಕೃಷಿ ಅಧಿಕಾರಿ ರಾಮಚಂದ್ರ ಲಮಾಣಿ, ರೈತ ಅನುವುಗಾರರಾದ ತಿಮ್ಮಣ್ಣ, ವೀರೇಶ ಗದ್ದಿ, ಲಿಂಗಾರೆಡ್ಡಿ, ಆನಂದ, ಅಕ್ಬರ್, ಬಸವರಾಜ, ಪ್ರಮುಖರಾದ ಟಿ.ದೊಡ್ಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.