ADVERTISEMENT

ಜೂಜಾಟ: 26 ಆರೋಪಿಗಳ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 12:37 IST
Last Updated 2 ಏಪ್ರಿಲ್ 2018, 12:37 IST

ಕೊಪ್ಪಳ: ಜಿಲ್ಲೆಯ ವಿವಿಧ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 24 ಗಂಟೆಯಲ್ಲಿ ಮಟಕಾ, ಜೂಜಾಟ, ಅಕ್ರಮ ಮರಳು ಮತ್ತು ಅಕ್ರಮ ಮದ್ಯ ಮಾರಾಟ‌ದ ಸ್ಥಳಗಳಿಗೆ ದಾಳಿ ನಡೆಸಿದ ಪೊಲೀಸರು 26 ಆರೋಪಿಗಳ ವಿರುದ್ಧ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.ಆರೋಪಿತಗಳ ವಿರುದ್ಧ ಒಟ್ಟು 12 ಪ್ರಕರಣ ದಾಖಲಿಸಿಕೊಂಡು 84,902 ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಅಕ್ರಮ ಮದ್ಯ ಮಾರಾಟದ 9 ಆರೋಪಿಗಳ ವಿರುದ್ಧ 7 ಪ್ರಕರಣ ದಾಖಲಿಸಿ ₹ 33,112 ವಶಪಡಿಸಿಕೊಳ್ಳಲಾಗಿದೆ.  ಜೂಟಾಟದ 15 ಆರೋಪಿಗಳ ವಿರುದ್ಧ 3 ಪ್ರಕರಣ ದಾಖಲಿಸಿ ₹ 50,290 ಜಪ್ತಿ ಮಾಡಲಾಗಿದೆ. ಮಟಕಾ ಜೂಜಾಟದ 2 ಪ್ರಕರಣಗಳ 2 ಆರೋಪಿಗಳಿಂದ ₹ 1,500 ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಮರಳು ಸಾಕಾಣಿಕೆಯ 1 ಪ್ರಕರಣಕ್ಕೆ ಸಂಬಂಧಿಸಿದಂತೆ 2 ಟ್ರ್ಯಾಕ್ಟರ್ ವಶಪಡಿಸಿಕೊ‍ಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.