ADVERTISEMENT

ನೌಕರರ ಸಂಘ: 28 ಸದಸ್ಯರ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 7:04 IST
Last Updated 18 ಜುಲೈ 2013, 7:04 IST

ಗಂಗಾವತಿ: ವಿವಿಧ ಇಲಾಖೆಗಳ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ  23 ಇಲಾಖೆಗಳ 28 ಸದಸ್ಯರು ಅವಿರೋಧ ಆಯ್ಕೆಯಾಗಿದ್ದರೆ. ಇನ್ನೂಳಿದ ಮೂರು ಇಲಾಖೆಗಳ ಮೂರು ಸ್ಥಾನಕ್ಕೆ ಒಟ್ಟು 19 ಅಕಾಂಕ್ಷಿಗಳು ಅಂತಿಮ ಕಣದಲ್ಲಿದ್ದಾರೆ.

ಜು. 16ರಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನದ ಬಳಿಕ ತಾಲ್ಲೂಕಿನ ಒಟ್ಟು 31 ಸದಸ್ಯ ಸ್ಥಾನಕ್ಕೆ 28 ಜನ ಅವಿರೋಧ ಆಯ್ಕೆಯಾದರು. ಇನ್ನೂಳಿದ ಮೂರು ಸ್ಥಾನಗಳಿಗೆ ಕಂದಾಯ, ಪ್ರಾಥಮಿ ಶಿಕ್ಷಣ ಮತ್ತು ತಾಲ್ಲೂಕು ಪಂಚಾಯಿತಿಯ 19ಜನ ಕಣದಲ್ಲಿದ್ದಾರೆ.

ಆವಿರೋಧ ಆಯ್ಕೆಯ ವಿವರ: ಕೊಂಡಯ್ಯ, ಪಿ.ಎಂ. ಮಲ್ಲಯ್ಯ (ಪಶು ಸಂಗೋಪನೆ), ಬದರಿನಾಥ ಜೋಶಿ (ವಾಣಿಜ್ಯ), ಹಟೇಲ್‌ಸಾಬ ಬಾಗಲಿ (ಆಹಾರ, ನಾಗರಿಕ ಸರಬರಾಜು), ಜಗನ್ನಾಥರಾವ್, ರಾಮಣ್ಣ (ನೀರಾವರಿ, ಲೋಕೋಪಯೋಗಿ), ಡಾ.ಡಿ.ಕೆ. ಮಾಳಿ, (ಪದವಿ ಪೂರ್ವ ಕಾಲೇಜು), ಸುರೇಶ (ಸಮಾಜ ಕಲ್ಯಾಣ), ನಾಗಭೂಷಣ, ಹನುಮಂತಪ್ಪ ರಾಠೋಡ (ಪ್ರೌಢ ಶಾಲೆ), ಎಂ. ಶ್ರೀನಿವಾಸ (ಅರಣ್ಯ), ಕಾಳಪ್ಪ (ಪೌರಾಡಳಿತ), ಶಿವಪುತ್ರಪ್ಪ (ಅಬಕಾರಿ), ಇಮಾಮ್‌ಸಾಬ (ಪ್ರಾದೇಶಿಕ ಕೋಳಿ ಸಾಗಾಣಿಕೆ), ವಿಜಯಕುಮಾರ, ವಿಜಯ್‌ಪ್ರಸಾದ, ಶರಣಪ್ಪ, ಸುಶೀಲಾದೇವಿ (ಆರೋಗ್ಯ), ನಾಗರಾಜ (ತೋಟಗಾರಿಕೆ), ಶರಣಬಸವರಾಜ (ಖಜಾನೆ), ಈರಣ್ಣ ತಳಿಗೇರಿ (ಭೂಮಾಪನ), ಫಕೀರಪ್ಪ (ಎಪಿಎಂಸಿ), ಲೋಕೋಶ (ನ್ಯಾಯಾಂಗ), ಎಂ.ಎಸ್. ರಾಯಚೂರು (ಸಿಡಿಪಿಒ), ಕುಪ್ಪಣ್ಣ ಮಿಣಜಗಿ (ಸಹಕಾರ ಸಂಘ), ಕೊಟ್ರೇಶ ಡಿ (ಐಟಿಐ ಕಾಲೇಜು), ಮಾರ್ಕಂಡಯ್ಯ (ಬಿಇಒ ಕಾರ್ಯಾಲಯ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಣದಲ್ಲಿ ಉಳಿದವರು: ಗುರುರಾಜ ಶಿರಸ್ತೇದಾರ, ಶರಣಪ್ಪ ಗ್ರಾಮ ಲೆಕ್ಕಿಗ, ವಿಶ್ವನಾಥ ಉಪ ತಹಶೀಲ್ದಾರ್ (ಕಂದಾಯ) ಮಹೇಶ, ಸಿದ್ದನಗೌಡ (ತಾಲ್ಲೂಕು ಪಂಚಾಯಿತಿ), ಶೇಖರಯ್ಯ, ಶಿವಾನಂದ ಶಿಳ್ಳಿನ, ರವಿ.ಕೆ.ಆರ್. ಶ್ಯಾಂಸುಂದರ್, ವಿಠ್ಠಲ್ ತುಕರಾಂ, ಬಸವರಾಜ   ಮ್ಯಾಗಳಮನಿ, ಕೇಶವರಾಜ, ಮಾರುತಿ, ಸುಂಕಪ್ಪ, ಭೀಮಣ್ಣ, ಹಂಪನಗೌಡ, ವಿಶ್ವನಾಥ ಮಟಗಿ, ವೆಂಕಟೇಶ ಮಧುಸೂದನ ಹಾಗೂ ಮಲ್ಲಿಕಾರ್ಜುನ (ಪ್ರಾಥಮಿಕ ಶಿಕ್ಷಣ) ಅಂತಿಮ ಚುನಾವಣಾ ಕಣದಲ್ಲಿದ್ದಾರೆ.

ಮಹಿಳಾ ಮೀಸಲಾತಿ ಇಲ್ಲ: ನೌಕರರ ಸಂಘದ ತಾಲ್ಲೂಕು ಘಟಕದ ಸದಸ್ಯರ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆಗೆ ನಾಲ್ಕು ಸ್ಥಾನ ದೊರೆತಿದ್ದು, ಈ ಪೈಕಿ ಮಹಿಳೆಯರಿಗೆ ಅವಕಾಶ ನೀಡಿಲ್ಲ ಎಂದು ಹಲವು ಶಿಕ್ಷಕಿಯರು ದೂರಿದ್ದಾರೆ.

ರಾಯಮ್ಮ ಮತ್ತು ಅನ್ನಮ್ಮ ಎಂಬ ಇಬ್ಬರು ಶಿಕ್ಷಕಿಯರು ನಾಮಪತ್ರ ಸಲ್ಲಿಸಿದ್ದರು. ಆದರೆ ಕೆಲ ಶಿಕ್ಷಕರು ಒತ್ತಡ ಹೇರಿ ನಾಮಪತ್ರ  ತೆಗೆಸಿದ್ದಾರೆ. ಈ ಮೂಲಕ ಮಹಿಳಾ ಮೀಸಲಾತಿಗೆ ಅನ್ಯಾಯ ಮಾಡಲಾಗಿದೆ ಎಂದು ಶಿಕ್ಷಕಿಯರು ಅಳಲು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಚುನಾವಣಾಧಿಕಾರಿ ಎ.ಸಿ. ಗಂಜಳ್ಳಿ ಮಾತನಾಡಿ, `ಮಹಿಳಾ ಮೀಸಲಾತಿ ಎಂಬುವುದು ನೌಕರರ ಸಂಘದಲ್ಲಿ ಇಲ್ಲ. ಆಯಾ ಇಲಾಖೆಗೆ ನಿಗದಿಯಾ ಸ್ಥಾನದಲ್ಲಿಯೆ ಹೊಂದಾಣಿಕೆಯ ಮೇಲೆ ಮೀಸಲಾತಿ ಕಲ್ಪಿಸಿಕೊಳ್ಳಬೇಕು' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.