ADVERTISEMENT

ಪ್ರವಾದಿ ಪೈಗಂಬರ ಸಮಾನತೆಯ ಹರಿಕಾರ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 9:40 IST
Last Updated 6 ಫೆಬ್ರುವರಿ 2012, 9:40 IST

ಕುಕನೂರು:  ಸಾವಿರಾರು ವರ್ಷಗಳ ಹಿಂದಿನ ಆಗಿನ ಕಾಲದಲ್ಲಿ ಸಮಾಜದ ಎಲ್ಲೆಡೆ ಕಂಡುಬರುತ್ತಿರುವ ಅತ್ಯಾಚಾರ, ಅನಾಚಾರ, ಹಿಂಸಾಚಾರವನ್ನು ತಡೆಗಟ್ಟಿದ ಶ್ರೇಯಸ್ಸು ಪ್ರವಾದಿ ಮಹ್ಮದ್ ಪೈಗಂಬರ್ ಅವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿಯ ಅಂಜುಮನ್ ಸಮಿತಿ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಮುಸ್ಲಿಂ ಸಮಾಜ ಬಾಂಧವರ 21 ಜೋಡಿ ಸಾಮೂಹಿಕ ವಿವಾಹ ಸಮಾರಂಭ ಉದ್ದೇಶಿಸಿ ಅವರು ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಹಾಲಪ್ಪ ಆಚಾರ್, ಮಾಜಿ ಶಾಸಕ ಹಸನ್‌ಸಾಬ ದೋಟಿಹಾಳ, ಬಿ.ಜೆ.ಪಿ ಯುವ ಮುಖಂಡ ನವೀನ್ ಗುಳಗಣ್ಣವರ, ಜಿ.ಟಿ.ಪಂಪಾಪತಿ, ಜಿಲ್ಲಾ ಪಂಚಾಯತಿ ಸದಸ್ಯ ಈರಪ್ಪ ಕುಡಗುಂಟಿ, ಮಾಜಿ ಸದಸ್ಯ ಸಿ.ಎಚ್.ಪೊಲೀಸ್‌ಪಾಟೀಲ, ನ್ಯಾಯವಾದಿ ಆಸೀಫ್‌ಅಲಿ, ಜಿಲ್ಲಾ ವಕ್ಫ ಬೋರ್ಡ ಉಪಾಧ್ಯಕ್ಷ ಪೀರಾಹುಸೇನ ಹೊಸಳ್ಳಿ ಹೇಳಿಡಿದರು.

ಇಲಕಲ್ ಸೈಯ್ಯದ್ ಷಾ ಅಬ್ದುಲ್ ಖಾದ್ರಿ, ಯಲಬುರ್ಗಾ ಶ್ರೀಧರ ಮುರಡಿ ಮಠ ಬಸವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಕುಕನೂರು ಜಾಮೀಯಾ ಮಸ್ಜೀದ್ ಮಹ್ಮದ್ ಖಮರ್ ರಜಾಕ್ ಖಾದ್ರಿ, ಪೇಶ್ ಇಮಾಮ್ ದೌಲತ್ ಖಾನ್, ಸಮಾಜದ ಮುಖಂಡರಾದ ಗೌಸುದ್ದೀನ್‌ಸಾಬ ಬನ್ನಿಕಟ್ಟಿ, ಕಾಶೀಮಸಾಬ ತಳಕಲ್, ಅಬ್ದುಲ್ ರಸೀದ್ ಮುಬಾರಕ್, ರಸೂಲ್‌ಸಾಬ ದಮ್ಮೂರ, ನ್ಯಾಯವಾದಿ ಎಂ.ಎಂ.ಜಾಲಿಹಾಳ, ಗ್ರಾಮ ಪಂಚಾಯತಿ ಅಧ್ಯಕ್ಷೆ ಯಲ್ಲಮ್ಮ ಗಾಣಿಗೇರ, ಉಪಾಧ್ಯಕ್ಷ ಕರಬಸಯ್ಯ ಬಿನ್ನಾಳ, ತಾಲ್ಲೂಕು ಪಂಚಾಯತಿ ಸದಸ್ಯರಾದ ಶೇಖರಪ್ಪ ವಾರದ, ರೇಣುಕಾ ಬೆದವಟ್ಟಿ, ಗುರುಲಿಂಗಯ್ಯ ಹಿರೇಮಠ, ಉದ್ಯಮಿ ಸತ್ಯನಾರಾಯಣ ಹರಪನಹಳ್ಳಿ, ದಾವಲಸಾಬ ಕುದರಿ, ಸಾಹಿತಿ ಡಾ.ಕೆ.ಬಿ.ಬ್ಯಾಳಿ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ರಾಮಣ್ಣ ಭಜಂತ್ರಿ, ಅಂದಪ್ಪ ಜವಳಿ, ಅಂದಪ್ಪ ಮುಂಡರಗಿ, ವರ್ತಕ ಸತ್ಯನಾರಾಯಣ ಕಲಾಳ, ಮೈಲಾರಪ್ಪ ಸಾಲ್ಮನಿ ಮತ್ತಿತರೆ ಗಣ್ಯರು ವೇದಿಕೆಯಲ್ಲಿದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರನ್ನು ಹಾಗೂ ವಿವಿಧ ಸಮಾಜದ ಗಣ್ಯರನ್ನು ಸಮಾಜದ ವತಿಯಿಂದ ಸನ್ಮಾನಿಸಲಾಯಿತು.

ಮೌಲಾಸಾಬ ಮಂಗಳಾಪುರ, ಖಾಜಾಪಾಷಾ ಮುದಗಲ್, ಖಾಜಾವಲಿ ಬನ್ನಿಕಟ್ಟಿ, ಪೀರಾಸಾಬ ಬಳ್ಳಾರಿ, ಡಾ.ದೂಲಿನಾಯಕ್ ಪೊಲೀಸ್‌ಪಾಟೀಲ, ಫಕೀರಸಾಬ ಬೆದವಟ್ಟಿ, ವೈ.ಚಮನ್‌ಸಾಬ, ಎ.ಪಿ.ಮುಧೋಳ, ಮಹ್ಮದ್ ಇಸಾಕ್ ದೇವದುರ್ಗ, ಅಬ್ದುಲ್‌ರಸೀದ್ ಹಣಜಗಿರಿ, ಕಾಶೀಮಸಾಬ ಬಿನ್ನಾಳ, ಮಹ್ಮದ ರಫಿ ಹಿರೇಹಾಳ, ಡಾ.ಸೈಯ್ಯದ್ ಸುಲ್ತಾನ್, ಮೆಹಬೂಬಸಾಬ ಯಮ್ಮಿ ಹಾಗೂ ಮುಸ್ಲಿಂ ಸಮಾಜದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.