ADVERTISEMENT

ಮದುವೆಗೆ ಹೆಣ್ಣು ನೋಡುತ್ತೇನೆ: ಸೈಯದ್‌ ಅಲಿ ಸವಾಲು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2017, 9:29 IST
Last Updated 21 ನವೆಂಬರ್ 2017, 9:29 IST

ಗಂಗಾವತಿ: ‘ನಾನು ಈಗಾಗಲೆ ನಾಲ್ಕು ಮದುವೆಯಾಗಿದ್ದು, ಐದನೇ ಮದುವೆಯೂ ಆಗುತ್ತೇನೆ. ಬ್ರೋಕರ್ ಸ್ಥಾನವಹಿಸಿ ಮದುವೆಗೆ ಹೆಣ್ಣನ್ನು ನೋಡುವಂತೆ ನಗರಸಭಾ ಸದಸ್ಯ ಶಾಮೀದ ಮನಿಯಾರ ಹಾಕಿದ್ದ ಸವಾಲು ನಾನು ಸ್ವೀಕರಿಸುತ್ತಿದ್ದೇನೆ’ ಎಂದು ಮುಖಂಡ ಸೈಯದ್ ಅಲಿ
ಹೇಳಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಮೀದ್ ಮನಿಯಾರ ಅವರಿಗೆ 5ನೇ ಮದುವೆಯ ಹೆಣ್ಣನ್ನು ನೋಡಲು ನಾನು ಸಿದ್ಧವಾಗಿದ್ದೇನೆ. ಅದಕ್ಕೂ ಮುಂಚೆ ಮನಿಯಾರ ತನ್ನ ಮೊದಲ ನಾಲ್ವರು ಹೆಂಡಂದಿರನ್ನು ಹೇಗಿಟ್ಟಿದ್ದಾರೆ ಎಂಬುವುದು ನೋಡಬೇಕಲ್ಲ’ ಎಂದು ವ್ಯಂಗ್ಯವಾಡಿದರು.

ಸುಳ್ಳು, ವಂಚನೆಗಳ ಮೂಲಕ ಮಹಿಳೆಯರನ್ನು ಯಾಮಾರಿಸಿ ಮದುವೆಯಾಗುವುದು ಅವರ ಖಯಾಲಿ. ಈ ಬಗ್ಗೆ ಎಲ್ಲ ದಾಖಲೆಗಳನ್ನು ಶೀಘ್ರ ಬಹಿರಂಗಗೊಳಿಸುತ್ತೇನೆ’ ಎಂದರು.

ADVERTISEMENT

‘ಮುಸ್ಲಿಂ ಧರ್ಮದ ಪ್ರಕಾರ ಖಾಜಿಗಳ ಬಳಿ ಇರುವ ಶಿಯಾನಾಮದಲ್ಲಿ ವರ, ತನ್ನ ಪೂರ್ವಪರ ಎಲ್ಲವನ್ನು ದಾಖಲಿಸಬೇಕು. ಆದರೆ ನಗರಸಭೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿದಂತೆ ಮನಿಯಾರ ಬಿಳಿ ಹಾಳೆಯ ಮೇಲೆ ಶಿಯಾನಾಮ ಬರೆಯಿಸಿ ಗೋವಾ ಮೂಲದ ಮಹಿಳೆಯಗೆ ವಂಚಿಸಿದ್ದಾರೆ’ ಎಂದು ಆರೋಪಿಸಿದರು.

‘ಮನಿಯಾರ ಅವರಿಂದ ವಂಚನೆಗೆ ಒಳಗಾದ ನಾಲ್ಕು ಜನ ಹೆಣ್ಣು ಮಕ್ಕಳನ್ನೂ ಇದೇ ವೇದಿಕೆ ಮೇಲೆ ಕರೆತಂದು ಅವರಿಗೆ ಮದುವೆ ಮಾಡುತ್ತೇನೆ’ ಎಂದು ಸವಾಲು ಹಾಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.