ADVERTISEMENT

‘ಮಹಿಳೆಗೆ ಕಾನೂನು ಜ್ಞಾನ ಅವಶ್ಯ’

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 7:02 IST
Last Updated 16 ಡಿಸೆಂಬರ್ 2013, 7:02 IST
ಕುಷ್ಟಗಿಯ ನ್ಯಾಯಾಲಯದ ಬಳಿ ಭಾನುವಾರ ಕಾನೂನು ಸಾಕ್ಷರತಾ ರಥಕ್ಕೆ ನ್ಯಾಯಾಧೀಶರಾದ ಸುಧಾ. ಎಸ್‌.ಓಂಕಾರ ಚಾಲನೆ ನೀಡಿದರು. ಎನ್‌. ನರಸಿಂಗ ರಾವ್‌, ಸಂಗನಗೌಡ ಪಾಟೀಲ ಇತರರು ಇದ್ದರು
ಕುಷ್ಟಗಿಯ ನ್ಯಾಯಾಲಯದ ಬಳಿ ಭಾನುವಾರ ಕಾನೂನು ಸಾಕ್ಷರತಾ ರಥಕ್ಕೆ ನ್ಯಾಯಾಧೀಶರಾದ ಸುಧಾ. ಎಸ್‌.ಓಂಕಾರ ಚಾಲನೆ ನೀಡಿದರು. ಎನ್‌. ನರಸಿಂಗ ರಾವ್‌, ಸಂಗನಗೌಡ ಪಾಟೀಲ ಇತರರು ಇದ್ದರು   

ಕುಷ್ಟಗಿ: ಬದಲಾಗುತ್ತಿರುವ ಸಾಮಾ ಜಿಕ, ಕೌಟುಂಬಿಕ ವ್ಯವಸ್ಥೆಗೆ ಅನುಗುಣ­ವಾಗಿ ಮಹಿಳೆಯರಿಗೆ ಕಾನೂನಿನ ಜ್ಞಾನ ಅವಶ್ಯ. ಈ ವಿಷಯದಲ್ಲಿ ಅರಿವು ಮೂಡಿ­ಸಲು ಕಾನೂನು ಸೇವೆಗಳ ಪ್ರಾಧಿ­ಕಾರ ಅನೇಕ ಕಾರ್ಯಕ್ರಮ­ಗಳನ್ನು ಜಾರಿಗೊಳಿಸಿದೆ ಎಂದು ಇಲ್ಲಿಯ ಸಿವಿಲ್‌ ಪ್ರಧಾನ ನ್ಯಾಯಾ­ಧೀಶರಾದ ಸುಧಾ.ಎಸ್‌. ಓಂಕಾರ ಹೇಳಿದರು.

ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಸ್ಥಳೀಯ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡ ಕಾನೂನು ಸಾಕ್ಷರತಾ ರಥಕ್ಕೆ  ಭಾನುವಾರ ಚಾಲನೆ ನೀಡಿ, ಬಳಿಕ ಹಿರೇಮನ್ನಾಪುರ ಗ್ರಾಮ­ದಲ್ಲಿ ನಡೆದ ಕಾನೂನು ವಿದ್ಯಾ
ಪ್ರಸಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾನೂನಿನ ತಿಳಿವಳಿಕೆ ಹೊಂದಿದಷ್ಟೂ ಮಹಿಳೆಯರು ವಿವಿಧ ರೀತಿಯ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಾ­ಗು­ತ್ತದೆ. ಕಾನೂನು ಸೇವಾ ಸಮಿತಿ ವತಿಯಿಂದ ನಡೆಯುವ ಅರಿವು ನೆರವು ಕಾರ್ಯಕ್ರಮದ ಪ್ರಯೋಜನವನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ತಹಶೀಲ್ದಾರ್‌ ಎನ್‌.ಬಿ.ಪಾಟೀಲ, ಕಂದಾಯ ಇಲಾಖೆಯಿಂದ ಅನುಷ್ಠಾನ­ಗೊಳ್ಳುವ ಕಾರ್ಯಕ್ರಮಗಳು ಮತ್ತು ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೇ ದುರ್ಮರಣಕ್ಕೆ ಒಳಗಾಗುವ ಬಿಪಿಎಲ್‌ ಕುಟುಂಬದ ಮುಖ್ಯಸ್ಥನ ಹತ್ತಿರದ ಸಂಬಂಧಿಕರಿಗೆ ರಾಷ್ಟ್ರೀಯ ಭದ್ರತಾ ಯೋಜನೆಯಲ್ಲಿ ₨ 20,000 ಪರಿಹಾರ ನೀಡಲಾಗುತ್ತದೆ ಎಂದರು.

ಗ್ರಾ.ಪಂ ಅಧ್ಯಕ್ಷೆ ಸರೋಜಾ ಹರಿಜನ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಸಂಗನಗೌಡ ಪಾಟೀಲ ಇತರರು ಇದ್ದರು. ವಕೀಲ ಎನ್‌.ನರಸಿಂಗರಾವ್‌, ಎಚ್‌.ಆರ್‌.ನಾಯಕ್‌ ಉಪನ್ಯಾಸ ನೀಡಿದರು.

ನಾಗಪ್ಪ ಸೂಡಿ, ರುದ್ರಗೌಡ ಪಾಟೀಲ, ಅಮರೇಗೌಡ ಪಾಟೀಲ, ಎಚ್‌.ಆರ್‌.ನಾಯಕ್‌, ಎಂ.ಎಸ್‌.ಗೋಡೆ, ಶರಣಗೌಡ ಪಾಟೀಲ, ಚಂದ್ರಶೇಖರ ಉಪ್ಪಿನ, ಎ.ಎಚ್‌.ಪಲ್ಲೇದ, ವೆಂಕಟೇಶ ಈಳಿಗೇರ, ಪ್ರಭು ಸೂಡಿ, ಸಿಬ್ಬಂದಿ ಸುನಿಲ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.