ADVERTISEMENT

ಹುಲಿಗಿ: ಸಂಭ್ರಮದ ಹುಲಿಗೆಮ್ಮದೇವಿ ಕಾರ್ತೀಕೋತ್ಸವ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 16:03 IST
Last Updated 3 ಡಿಸೆಂಬರ್ 2019, 16:03 IST
ಮುನಿರಾಬಾದ್‍ನ ಹುಲಿಗಿಯ ಪ್ರತಿಷ್ಠಿತ ಶ್ರೀಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನ ಆವರಣದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಲಾಯಿತು.
ಮುನಿರಾಬಾದ್‍ನ ಹುಲಿಗಿಯ ಪ್ರತಿಷ್ಠಿತ ಶ್ರೀಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ತಿಕೋತ್ಸವದ ಅಂಗವಾಗಿ ದೇವಸ್ಥಾನ ಆವರಣದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಲಾಯಿತು.   

ಮುನಿರಾಬಾದ್: ಸಮೀಪದ ಹುಲಿಗಿಯ ಪ್ರತಿಷ್ಠಿತ ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಮಂಗಳವಾರ ಕಾರ್ತೀಕೋತ್ಸವದ ಅಂಗವಾಗಿ ದೇವಸ್ಥಾನ ಆವರಣದಲ್ಲಿ ಸಾವಿರಾರು ದೀಪಗಳನ್ನು ಬೆಳಗಿಸಲಾಯಿತು.

ದೇವಸ್ಥಾನ ಸಮಿತಿ, ಪೂಜಾರ ಮನೆತನದವರು ಹಾಗೂ ಗ್ರಾಮದ ದೈವದರು ಸೇರಿ ಪ್ರತಿವರ್ಷ ಕಾರ್ತೀಕೋತ್ಸವವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಗ್ರಾಮಸ್ಥರಿಂದ ಸಂಗ್ರಹಿಸಿದ ದೀಪದ ಎಣ್ಣೆಯನ್ನು ಹೂವಿನಿಂದ ಅಲಂಕೃತ ವಾಹನದಲ್ಲಿ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಗುತ್ತದೆ. ದೇಗುಲದ ಪಶ್ಚಿಮದ್ವಾರದ ಮುಂಭಾಗದಲ್ಲಿ ಆಕರ್ಷಕ ಪುಷ್ಪರಂಗೋಲಿಯಲ್ಲಿ ಶ್ರೀ ಹುಲಿಗೆಮ್ಮದೇವಿಯ ಚಿತ್ರ ಭಕ್ತರ ಗಮನ ಸೆಳೆಯಿತು.

ದೇವಸ್ಥಾನದ ಗೋಪುರ ಮತ್ತು ಸುತ್ತಲೂ ರಂಗುರಂಗಿನ ಬಣ್ಣದ ವಿದ್ಯುತ್‍ ದೀಪಗಳು ಗಮನಸೆಳೆದವು. ದೇವಿಗೆ ವಿಶೇಷ ಪೂಜೆ ನಂತರ ದೇವಾಲಯದ ಮುಂಭಾಗ ಮತ್ತು ಮುಖ್ಯರಸ್ತೆಯ ಎರಡೂ ಬದಿ ದೀಪಗಳನ್ನು ಬೆಳಗಿಸಲಾಯಿತು.

ADVERTISEMENT

ಕೆಲವು ಭಕ್ತರು ತಾವೇ ತಂದ ಎಣ್ಣೆಯನ್ನು ಪ್ರಣತಿಗೆ ಸುರಿದು ದೀಪಬೆಳಗಿದರೆ, ಇನ್ನುಕೆಲವರು ಕುಟುಂಬ ಸಮೇತ ಬಂದ ಭಕ್ತರು ಗ್ರಾಮಸ್ಥರು ಸಂಗ್ರಹಿಸಿದ ಎಣ್ಣೆಯನ್ನು ಸುರಿದು ಶ್ರದ್ಧಾ ಭಕ್ತಿಯಿಂದ ದೀಪ ಬೆಳಗಿದರು. ದೇಗುಲದ ಮುಂಭಾಗದ ಗರುಡಗಂಭದ (ದೀಪ ಸ್ಥಂಭ)ಮೇಲೆ ಕೂಡ ದೀಪವನ್ನು ಬೆಳಗಿಸಲಾಯಿತು.

ಪ್ರತಿವರ್ಷ ಇದನ್ನು ಗ್ರಾಮಸ್ಥರು, ಪೂಜಾರ, ಬಾಬುದಾರರು, ಪಾಯಸದವರು ಮನೆತನದ ವಂಶಸ್ಥರು ಸೇರಿ ಈಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ ಎಂದು ಕಾರ್ತಿಕೋತ್ಸವ ಸಮಿತಿಯ ಮಾರ್ಕಂಡಪ್ಪ ಹನಸಿ, ತಾಲ್ಲೂಕು ಪಂಚಾಯಿತಿ ಸದಸ್ಯ ಫಾಲಾಕ್ಷಪ್ಪ ಗುಂಗಾಡಿ ಪ್ರಜಾವಾಣಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.