ADVERTISEMENT

ಸಂಚಾರಿ ನಿಯಮ ಪಾಲಿಸಿ: ಪೊಲೀಸರಿಂದ ಜಾಗೃತಿ

ರಸ್ತೆ ಸುರಕ್ಷತಾ ಸಪ್ತಾಹ; ಪೊಲೀಸರಿಂದ ಜಾಗೃತಿ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2021, 5:03 IST
Last Updated 18 ಅಕ್ಟೋಬರ್ 2021, 5:03 IST
ಅಳವಂಡಿ ಪೋಲಿಸ್ ಠಾಣೆಯ ಪೊಲೀಸರು ರಸ್ತೆ ಅಪಘಾತಗಳ ನಿಯಂತ್ರಣದ ಬಗ್ಗೆ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಿದರು
ಅಳವಂಡಿ ಪೋಲಿಸ್ ಠಾಣೆಯ ಪೊಲೀಸರು ರಸ್ತೆ ಅಪಘಾತಗಳ ನಿಯಂತ್ರಣದ ಬಗ್ಗೆ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸಿದರು   

ಅಳವಂಡಿ: ಗ್ರಾಮದ ಪೋಲಿಸ್ ಠಾಣೆಯ ವತಿಯಿಂದ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ಸುರಕ್ಷತೆ ಮತ್ತು ರಸ್ತೆ ಅಪಘಾತಗಳ ನಿಯಂತ್ರಣದ ಬಗ್ಗೆ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಪೋಲಿಸರಿಂದ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಪಿಎಸ್ಐ ಮಾತಂಡಪ್ಪ ಮಾತನಾಡಿ , ಅನೇಕ ಅಪಘಾತಗಳು ನಮ್ಮ ತಪ್ಪುಗಳಿಂದಲೇ ಆಗುತ್ತವೆ. ಚಾಲಕರು ವಾಹನದಲ್ಲಿ ಕುಳಿತ ಕೂಡಲೇ ತಮ್ಮ ಕುಟುಂಬದವರನ್ನು ನೆನಪಿಸಿಕೊಳ್ಳಬೇಕು. ಎಲ್ಲಕಿಂತ ಜೀವ ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡುವುದನ್ನು ಕಡ್ಡಾಯವಾಗಿ ನಿಲ್ಲಿಸಬೇಕು ಎಂದು ಸೂಚಿಸಿದರು.

ಚಾಲಕರು ರಸ್ತೆ ನಿಯಮಗಳನ್ನು ಹಾಗೂ ಸಂಚಾರ ಚಿಹ್ನೆಗಳನ್ನು ಚೆನ್ನಾಗಿ ಅರಿತುಕೊಳ್ಳಬೇಕು. ವಾಹನ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಬೇಕು. ಸ್ವಲ್ಪವೂ ಬೇಜವಾಬ್ದಾರಿ ಅಥವಾ ನಿರ್ಲಕ್ಷ್ಯ ತೋರದೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡಬೇಕು. ದ್ವಿಚಕ್ರವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕು. ಸಂಚಾರಿ ನಿಯಮಗಳನ್ನು ಪಾಲನೆ ಮಾಡಿದರೆ ಸಾಕಷ್ಟು ಅಪಘಾತಗಳನ್ನು ತಡೆಗಟ್ಟಬಹುದು ಎಂದರು.

ADVERTISEMENT

ಪೋಲಿಸ್ ಸಿಬ್ಬಂದಿ ಮಾರುತಿ ಪೂಜಾರ, ಗವಿಸಿದ್ದಪ್ಪ, ಸಂತೋಷ ಕರಡಿ, ರುದ್ರೇಶ ಚಿಗರಿ ಹಾಗೂ ಸಾರ್ವಜನಿಕರು, ವಾಹನ
ಸವಾರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.