ಶಿವರಾಜ ತಂಗಡಗಿ
ಕಾರಟಗಿ (ಕೊಪ್ಪಳ ಜಿಲ್ಲೆ): ‘ರಾಜ್ಯದಲ್ಲಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯ ಅಧ್ಯಯನವನ್ನು ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗದ ಆಯೋಗ ಮಾಡಿದೆ. ಇದು ಜಾತಿ ಗಣತಿಯಲ್ಲ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ ‘ಜಾತಿ ಗಣತಿಯನ್ನು ನಾವು ಮಾಡಲು ಬರುವುದಿಲ್ಲ. ರಾಜ್ಯದ 6 ಕೋಟಿ ಜನರ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿ ಅರಿಯಲು ವರದಿ ಸಿದ್ಧವಾಗಿದೆ. ರಾಜ್ಯದ 5 ಕೋಟಿ ಜನರನ್ನು ಸಮಿತಿ ಸದಸ್ಯರು ಭೇಟಿಯಾಗಿ ವರದಿ ತಯಾರಿಸಿದ್ದಾರೆ. ಇದಕ್ಕಾಗಿ 1.22 ಲಕ್ಷ ಶಿಕ್ಷಕರು ಕೆಲಸ ಮಾಡಿದ್ದಾರೆ. ಕುರುಬ ಜನಾಂಗದಲ್ಲಷ್ಟೇ ಶಿಕ್ಷಕರು ಇಲ್ಲ. ಒಟ್ಟು 56 ಮಾನದಂಡಗಳನ್ನು ಅನುಸರಿಸಿ ವರದಿ ಸಿದ್ದಪಡಿಸಲಾಗಿದೆ’ ಎಂದು ತಿಳಿಸಿದರು.
‘ಜಾತಿ ನೋಡದೇ ಬಡ ಕುಟುಂಬಗಳಿಗೆ ಸರ್ಕಾರ ಏನೆಲ್ಲಾ ಕಲ್ಪಿಸಬಹುದು ಎಂಬ ಪರಿಕಲ್ಪನೆ ಬರಲಿದೆ. ಇಂಥ ಸಮೀಕ್ಷೆಯನ್ನು ಹಿಂದೆ ಯಡಿಯೂರಪ್ಪ, ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿಸಲು ಸಾಧ್ಯವಾಗಿರಲಿಲ್ಲ. ಜೆಡಿಎಸ್‌ನವರಿಗೆ ಬಡವರು ಉದ್ದಾರವಾಗುವುದು ಬೇಕಿಲ್ಲ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.