ತಳುವಗೇರಾ (ಕುಷ್ಟಗಿ): ಯಲಬುರ್ಗಾ ಮತ್ತು ಕುಷ್ಟಗಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಡಿಬಿಒಟಿ ಆಧಾರಿತ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕೆಲಸಗಾರರಿಗೆ ಸಂಬಂಧಿಸಿದ ಕಾರ್ಮಿಕರ ಸಂಘವನ್ನು ಅಸ್ತಿತ್ವಕ್ಕೆ ತರಲಾಯಿತು.
ಭಾನುವಾರ ತಾಲ್ಲೂಕಿನ ತಳುವಗೇರಾ ಸೀಮಾಂತರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಘವನ್ನು ಮಾಜಿ ಶಾಸಕ ಪರಣ್ಣ ಮುನವಳ್ಳಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ಶ್ರಮಜೀವಿಗಳಿಗೆ ಅನ್ಯಾಯವಾದಾಗ ಸಮಾಜ ಮತ್ತು ರಾಜಕೀಯ ಪ್ರತಿನಿಧಿಗಳು ದುಡಿಯುವ ವರ್ಗದವರ ಪರ ಬೆನ್ನೆಲುಬಾಗಿ ನಿಲ್ಲಬೇಕು. ಅದೇ ರೀತಿ ತಮಗೆ ವಹಿಸಿದ ಕೆಲಸವನ್ನು ಕಾರ್ಮಿಕರು ಶ್ರದ್ಧೆಯಿಂದ ನಿರ್ವಹಿಸಬೇಕು. ಸಂಘದ ಸದಸ್ಯರು ಕ್ರಿಯಾಶೀಲರಾಗಿರಬೇಕು’ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಮಾರುತಿ ದೊಡ್ಡಮನಿ ಸಂಘದ ಧ್ಯೇಯೋದ್ದೇಶಗಳ ಕುರಿತು ವಿವರಿಸಿದರು. ಸ್ಥಳೀಯ ಕಾರ್ಮಿಕರು ಉದ್ಯೋಗದಿಂದ ವಂಚಿತರಾಗದಂತೆ ಸಹಕಾರ ನೀಡಲು ಮನವಿ ಮಾಡಿದರು.
ಪ್ರಮುಖರಾದ ಶೇಖರ ಹೊರಪೇಟಿ, ಚಂದ್ರಕಾಂತ ವಡಗೇರಿ, ಬಸವರಾಜ್ ಮಾಲಿಗೌಡರ, ಯಮನೂರಪ್ಪ ಮನ್ನೆರಾಳ, ಶರಣಪ್ಪ ರೂಡಗಿ, ದೊಡ್ಡಪ್ಪ ಕೌದಿ, ದುರುಗೇಶ ಮಾದರ, ಸಂಘದ ಉಪಾಧ್ಯಕ್ಷ ರವಿ ಜಾಲಹಳ್ಳಿ, ಮಹೇಶಗೌಡ ಪಾಟೀಲ, ಅಂಬರೀಶ್. ಶಿವಪ್ಪ ಬಂಡಿ, ಶರಣಪ್ಪ ಗೌಡರ ಇತರರು ಇದ್ದರು. ಪ್ರಭು ವಸ್ತ್ರದ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.