ಪ್ರಜಾವಾಣಿ ವಾರ್ತೆ
ಕನಕಗಿರಿ: ‘ಪ್ರತಿಯೊಂದು ಗ್ರಾಮಗಳಲ್ಲಿ ಸಸಿಗಳನ್ನು ನೆಟ್ಟು ನಿರಂತವಾಗಿ ಪೋಷಣೆ ಮಾಡಿದರೆ ರಾಜ್ಯ ಹಸಿರು ಕರ್ನಾಟಕವಾಗಲಿದೆ‘ ಎಂದು ಸಾಹಿತಿ ಅಲ್ಲಾಗಿರಿರಾಜ ತಿಳಿಸಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ವತಿಯಿಂದ ಇಲ್ಲಿನ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಈಚೆಗೆ ನಡೆದ ಕೋಟಿ ವೃಕ್ಷ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬಡವರು, ಬೀದಿ ಬದಿ ವ್ಯಾಪಾರಸ್ಥರು, ದುರ್ಬಲ ವರ್ಗದವರ ಏಳಿಗೆಗೆ ಕಲ್ಯಾಣ ಕರ್ನಾಟಕ ಸಂಘ ಶ್ರಮಿಸುತ್ತಿರುವುದು ಶ್ಲಾಘನೀಯ‘ ಎಂದರು.
ಮುಖ್ಯಶಿಕ್ಷಕಿ ಜಯಲಕ್ಷ್ಮೀ ಸಜ್ಜನ್, ಜಿಲ್ಲಾ ಸಂಯೋಜಕರಾದ ಮಂಜುನಾಥ ಮಸ್ಕಿ, ರವಿಕುಮಾರ, ಮಂಜುನಾಥ ಹೊಸ್ಕೇರಾ ಮಾತನಾಡಿದರು.
ಪ್ರಮುಖರಾದ ಪ್ರಶಾಂತ ಪ್ರಭುಶೆಟ್ಟರ, ಮಲಕೇಶಿ ಕೊಟಿ, ಶಿವಕುಮಾರ ಮ್ಯಾಗೇರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.