ಕೊಪ್ಪಳ: ಅಖಿಲ ಕರ್ನಾಟಕ ವಾಲ್ಮೀಕಿ ಮಹಾಸಭಾ ಕಾರಟಗಿ ತಾಲ್ಲೂಕು ಘಟಕದ ನೂತನ ಅಧ್ಯಕ್ಷರಾಗಿ ಗಿರಿಯಪ್ಪ ಬೂದಿ ಆಯ್ಕೆಯಾಗಿದ್ದಾರೆ.
ಪಟ್ಟಣದ ಗುಡಿತಿಮ್ಮಪ್ಪನ ಕ್ಯಾಂಪ್‌ನಲ್ಲಿರುವ ಮಹರ್ಷಿ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಜಿಲ್ಲಾಧ್ಯಕ್ಷ ಕೆ.ಎನ್ ಪಾಟೀಲ್, ನಿರ್ಗಮಿತ ಅಧ್ಯಕ್ಷ ಗದ್ದೆಪ್ಪ ನಾಯಕ, ಹಿರಿಯರಾದ ಶಿವರೆಡ್ಡಿ ನಾಯಕ ವಕೀಲರು ಹಾಗೂ ಮುಖಂಡರ ಸಮ್ಮುಖದಲ್ಲಿ ಈ ಆಯ್ಕೆ ನಡೆಯಿತು.
ಗೌರವಾಧ್ಯಕ್ಷರಾಗಿ ನಾಗನಗೌಡ ತೊಂಡಿಹಾಳ, ಪ್ರಧಾನ ಕಾರ್ಯದರ್ಶಿಯಾಗಿ ಸೋಮನಾಥ ಹೆಬ್ಬಡದ ಅವರನ್ನು ಆಯ್ಕೆ ಮಾಡಲಾಯಿತು.
ಗ್ರಾ.ಪಂ ಅಧ್ಯಕ್ಷ ವೀರೇಶ ಮೈಲಾಪುರ, ರಾಘವೇಂದ್ರ ಹುಳ್ಕಿಹಾಳ, ಪುರಸಭೆ ಸದಸ್ಯ ದೊಡ್ಡಬಸವರಾಜ ಬೂದಿ, ನಾಮ ನಿರ್ದೇಶಿತ ಸದಸ್ಯ ಸೋಮಶೇಖರಪ್ಪ ಗ್ಯಾರೇಜ್, ತಾ.ಪಂ ಮಾಜಿ ಸದಸ್ಯ ಗವಿಸಿದ್ದಪ್ಪ ಉಳೇನೂರು, ತಿಪ್ಪಣ್ಣ ಮರಲಾನಹಳ್ಳಿ, ಲಿಂಗಪ್ಪ ತೊಂಡಿಹಾಳ, ಪ್ರಮುಖರಾದ ಪ್ರಭುರಾಜ್ ಬೂದಿ, ಸೋಮನಾಥ್ ದೊಡ್ಡಮನಿ, ದುರುಗೇಶ ಪ್ಯಾಟ್ಯಾಳ, ಶಿವನಗೌಡ ಸಿಂಗನಾಳ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.