ADVERTISEMENT

ಪೊಲೀಸರ ನಿಂದನೆ: ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2012, 8:05 IST
Last Updated 1 ಜುಲೈ 2012, 8:05 IST
ಪೊಲೀಸರ ನಿಂದನೆ: ಯುವಕ ಆತ್ಮಹತ್ಯೆ
ಪೊಲೀಸರ ನಿಂದನೆ: ಯುವಕ ಆತ್ಮಹತ್ಯೆ   

ಮಳವಳ್ಳಿ: ಪೊಲೀಸರ ನಿಂದನೆಗೆ ಬೇಸತ್ತು ಮನೆಯ ಕೊಠಡಿಯಲ್ಲೇ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ ಶರಣಾಗಿರುವ ಘಟನೆ ತಾಲ್ಲೂಕಿನ ದೊಡ್ಡಭೂವಳ್ಳಿಯಲ್ಲಿ ಶುಕ್ರವಾರ ತಡರಾತ್ರಿ ನಡೆದಿದೆ.

ಗ್ರಾಮದ ಬಸವರಾಜು ಅವರ ಪುತ್ರ ವಿಜಯ್‌ಕುಮಾರ್(28) ಎಂಬಾತನೆ ನೇಣಿಗೆ ಶರಣಾದ ದುರ್ದೈವಿ.
`ನನ್ನ ಸಾವಿಗೆ ಬೆಳಕವಾಡಿ ಪಿಎಸ್‌ಐ ಹಾಗೂ ಐವರು ಪೊಲೀಸರೇ ಕಾರಣ~ ಎಂದು ಡೆತ್‌ನೋಟ್ ಬರೆದಿಟ್ಟು~ ಸಾವಿಗೆ ಶರಣಾಗಿದ್ದಾನೆ.

ಈತ ಶುಕ್ರವಾರ ರಾತ್ರಿ ತಮ್ಮ ಮನೆಯ ಬಳಿ ಇದ್ದಾಗ ಜೂಜು ಕೋರ ರನ್ನು ಹಿಡಿಯಲು ಬಂದ ಬೆಳಕವಾಡಿ ಪೊಲೀಸರು ಈತನನ್ನು ವಶಕ್ಕೆ ತೆಗೆದು ಕೊಂಡರು. ಠಾಣೆಗೆ ಕರೆ ದೊಯ್ದು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಇದರಿಂದ ಮನನೊಂದು ನೇಣಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.

ಶುಕ್ರವಾರ ರಾತ್ರಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಬೆಳಕವಾಡಿ ಪಿಎಸ್‌ಐ ಜಯಕುಮಾರ್, ಇತರೆ ಐವರು ಸಿಬ್ಬಂದಿಯವರು ದಾಳಿ ನಡೆ ಸಲು ಬಂದಾಗ ಜೂಜಾಡುತ್ತಿದ್ದವರು ಪರಾರಿಯಾಗಿದ್ದಾರೆ.

ಆದರೆ, ಮನೆಯ ಬಳಿಯಿದ್ದ ವಿಜಯ್‌ಕುಮಾರ್ ಹಾಗೂ ಪರಮೇಶ್ ಎಂಬುವವರನ್ನು ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಕ್ಕಪಕ್ಕದಲ್ಲಿದ್ದವರು ಇವರು ಜೂಜಾಡುತ್ತಿರಲಿಲ್ಲ ಎಂದು ಹೇಳಿದರೂ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

ಠಾಣೆಗೆ ಕರೆದುಕೊಂಡು ಹೋಗಿ ಅವಾಚ್ಯ ಪದಗಳಿಂದ ನಿಂದಿ ಥಳಿಸಿದ್ದಾರೆ. ನಂತರ ಗ್ರಾಮದ ಸದಾ, ಹೊನ್ನಪ್ಪ ಹಾಗೂ ಮೃತರ ಚಿಕ್ಕಪ್ಪ ಷಡಕ್ಷರಿ ಎಂಬುವರು ಠಾಣೆಗೆ ಜಾಮೀನು ನೀಡಿ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾರೆ.

ಮನೆಗೆ ಬಂದ ನಂತರ ತಡರಾತ್ರಿ ಡೆತ್‌ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಎಂದಿನಂತೆ ಶನಿವಾರ ಬೆಳಿಗ್ಗೆ ಮೃತನ ಸಹೋದರಿ ಹಾಲು ನೀಡಲು ಹೋದಾಗ ನೇಣುಬಿಗಿದುಕೊಂಡಿರುವುದು ಪತ್ತೆಯಾಗಿದೆ. ಇವರು ನೋಡಿ ಕಿರುಚಿಕೊಂಡಿದ್ದಾರೆ ಇದರಿಂದ ಅಕಕ್ಕಪಕ್ಕದ ಜನರು ಜಮಾವೆಣೆಗೊಂಡಿದ್ದಾರೆ. ನಂತರ ವಿಷಯ ತಿಳಿಯುತ್ತಿದ್ದಂತೆ ಗ್ರಾಮದ ಸುತ್ತಮುತ್ತಲಿನ ಜನರು ಬಂಧುಬಳಗ ಸೇರಿಕೊಂಡು ಪೊಲೀಸರ ವಿರುದ್ದ ತೀವ್ರವಾಗಿ ಖಂಡಿಸಿ ಸಾವಿಗೆ ಕಾರಣರಾದ ಪೊಲೀಸರ ವಿರುದ್ದ ಕ್ರಮತೆಗೆದುಕೊಳ್ಳಬೇಕು, ಮೃತನ ಕುಟುಂಬದವರಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.

ಸ್ಥಳಕ್ಕೆ ಎಸ್ಪಿ ಕೌಶಲೇಂದ್ರಕುಮಾರ್, ಹೆಚ್ಚುವರಿ ಎಸ್ಪಿ ರಾಜಣ್ಣ, ಡಿವೈಎಸ್ಪಿ ಎಂ.ಕೆ.ಉತ್ತಪ್ಪ, ತಹಶೀಲ್ದಾರ್ ಎಂ.ಆರ್.ರಾಜೇಶ್ ಅವರು ಭೇಟಿ ನೀಡಿದ್ದರು.

ಶಾಸಕ ಪಿ.ಎಂ.ನರೇಂದ್ರಸ್ವಾಮಿ, ಮೈಷುಗರ್ಸ್‌ ಅಧ್ಯಕ್ಷ ನಾಗರಾಜಪ್ಪ, ಸಮಾಜಸೇವಕ ಮುನಿರಾಜು, ಬಿಜೆಪಿ ಮುಖಂಡ ಎಂ.ಕೆಸುಂದ್ರಪ್ಪ, ಕುಂದೂರು ಮೂರ್ತಿ, ಸದಾ,ಜಿಲ್ಲಾ ಪಂಚಾಯಿತಿ ಸದಸ್ಯ ಆರ್.ಎನ್.ವಿಶ್ವಾಸ್ ಇನ್ನೂ ಹಲವರು ಸೇರಿ ಘಟನೆಯ ಬಗ್ಗೆ ಅಧಿಕಾರಿಗಳೊಡನೆ ಚರ್ಚಿಸಿದರು.

ಅಂತಿಮವಾಗಿ ಎಸ್ಪಿ ಕೌಶಲೇಂದ್ರಕುಮಾರ್ ಅವರು ಪ್ರತಿಕ್ರಿಯಿಸಿ ಪಿಎಸ್‌ಐ ಅವರನ್ನು ಅಮಾ ನತು ಮಾಡಲಾಗುವುದು, ಉಳಿದ ಸಿಬ್ಬಂದಿಯವರ ಮೇಲೆ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.