ನಾಗಮಂಗಲ: ಸಮರ್ಪಕ ಬಸ್ ಸಂಚಾರಕ್ಕೆ ಆಗ್ರಹಿಸಿ ತಾಲ್ಲೂಕಿನ ದೇವಲಾಪುರ ಹೋಬಳಿಯ ದೊಡ್ಡಜಕ್ಕನಹಳ್ಳಿ ಗ್ರಾಮ ದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳು ಕೆಎಸ್ಆರ್‌ಟಿಸಿ ಬಸ್ ತಡೆದು ಪ್ರತಿಭಟನೆ ನಡೆಸಿದರು.
ನಾಗಮಂಗಲ ಯಡಿಯೂರು ಮಾರ್ಗದಲ್ಲಿ ಸಂಚರಿಸುವ ಕೆಎಸ್ಆರ್ ಟಿಸಿ ಬಸ್ಸುಗಳನ್ನು ಅವಲಂಬಿಸಿಕೊಂಡಿ ರುವ ದೊಡ್ಡಜಕ್ಕನಹಳ್ಳಿ, ತೊರೆಮಲ್ಲ ನಾಯ್ಕನಹಳ್ಳಿ, ಬಿಸನೆಲೆ, ಕತ್ತರಗುಪ್ಪೆ, ತೊಳಸಿಕೊಂಬರಿ, ಯಡವನಹಳ್ಳಿ, ದೊಡ್ಡಚಿಕ್ಕನಹಳ್ಳಿ, ಮುತ್ಸಂದ್ರ, ಅಂಕನ ಹಳ್ಳಿ, ಶಿಲ್ಪಾಪುರ, ಮೈಲಾರಪಟ್ಟಣ, ದಡಮುಡಿಕೆ ಸೇರಿ ಈ ಭಾಗದ ನೂರಾರು ವಿದ್ಯಾರ್ಥಿಗಳು ನಾಗಮಂಗಲದ ಕಾಲೇಜುಗಳಿಗೆ ತೆರಳಿ ವ್ಯಾಸಂಗ ಪಡೆಯುತ್ತಿದ್ದೇವೆ. ಆದರೆ, ಸಮಯಕ್ಕೆ ಸರಿಯಾಗಿ ಬಸ್ ಸಂಚರಿಸುತ್ತಿಲ್ಲ ಆದ್ದ ರಿಂದ ನಮಗೆ ತೊಂದರೆ ಆಗುತ್ತಿದೆ ಎಂದು ಪ್ರತಿಭಟನಾನಿರತ ವಿದ್ಯಾರ್ಥಿ ಗಳು ಆರೋಪಿಸಿದರು. ಕೆಎಸ್ಆರ್‌ಟಿಸಿ ಅಧಿಕಾರಿಗಳ ವಿರುದ್ಧ ವಿದ್ಯಾರ್ಥಿಗಳು ಘೋಷಣೆ ಕೂಗಿದರು.
ಬಸ್ ಪಾಸ್ ಹೊಂದಿರುವ ಈ ಮಾರ್ಗದ 100ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಪ್ರತಿನಿತ್ಯ ಒಂದಲ್ಲೊಂದು ರೀತಿಯಲ್ಲಿ ಸಮಸ್ಯೆ ಎದುರಿಸು ವಂತಾಗಿದೆ. ಇದರಿಂದಾಗಿ ನಮ್ಮ ಪಾಠ ಪ್ರವಚನಗಳಿಗೆ ಅಡಚಣೆಯಾಗುತ್ತಿದೆ ಎಂದು ಮಕ್ಕಳು ತಮ್ಮ ಅಳಲು ತೋಡಿ ಕೊಂಡರು. ಸ್ಥಳಕ್ಕೆ ಡಿಪೊ ಅಧಿಕಾರಿಗಳು ಭೇಟಿ ನೀಡಬೇಕೆಂದು ಪಟ್ಟುಹಿಡಿದರು.
ನಂತರ ಸ್ಥಳಕ್ಕೆ ಭೇಟಿ ನೀಡಿದ ನಾಗಮಂಗಲ ಕೆಎಸ್ಆರ್‌ಟಿಸಿ ಡಿಪೊ ಅಧಿಕಾರಿಗಳು ಶಾಲಾ ಕಾಲೇಜು ಸಮಯದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಬಸ್ ಸಂಚಾರಕ್ಕೆ ಸೂಕ್ತ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟರು.
ಯತೀಶ್‌ಗೌಡ, ವಿನಯ್, ವೀಣಾ, ಹೇಮಾ, ಚಂದು, ಅರ್ಷಿತಾ, ಮಮತಾ, ಪ್ರೇಮಕುಮಾರ್, ಸಂಜು, ಸಂತೋಷ್, ಮೋಹನ್, ವಿವೇಕ, ಮಂಜು ಪ್ರತಿ ಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.