ADVERTISEMENT

ಬೆಂಗಳೂರಿನ ಅಣ್ಣ-ತಂಗಿಗೆ ಆರತಿ ಉಕ್ಕಡದಲ್ಲಿ ಅಶ್ರಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2012, 7:25 IST
Last Updated 14 ಜನವರಿ 2012, 7:25 IST

ಶ್ರೀರಂಗಪಟ್ಟಣ:  ಬೆಂಗಳೂರಿನಿಂದ ತಪ್ಪಿಸಿಕೊಂಡು ಬಂದು ತಾಲ್ಲೂಕಿನ ಆರತಿ ಉಕ್ಕಡದ ಬಳಿ ಅಲೆದಾಡುತ್ತಿದ್ದ ಇಬ್ಬರು ಮಕ್ಕಳಿಗೆ ಹಣ್ಣು-ಕಾಯಿ ವ್ಯಾಪಾರಿ  ಅಶ್ರಯ ನೀಡಿದ್ದಾರೆ.

ಬೆಂಗಳೂರಿನ ನಗರ್ತರಪೇಟೆಯಿಂದ ಬಂದಿದ್ದಾಗಿ ಹೇಳಿಕೊಳ್ಳುವ ಈ ಮಕ್ಕಳು ಅಲ್ಲಿನ ಶಾರದಾ ಶಾಲೆಯಲ್ಲಿ ಓದುತ್ತಿರುವುದಾಗಿ ತಿಳಿಸಿದ್ದಾರೆ. ಅಭಿ ಎಂಬ ಬಾಲಕ 6ನೇ ತರಗತಿ ಹಾಗೂ ಆತನ ತಂಗಿ ಅನ್ನಪೂರ್ಣ 5ನೇ ತರಗತಿ ಕಲಿಯುತ್ತಿರುವುದಾಗಿ ತಿಳಿಸಿದ್ದಾರೆ. ತಂದೆ ನಾಗೇಂದ್ರಪ್ಪ ಚಿನ್ನದ ಅಂಗಡಿ ಯಲ್ಲಿ ವಾಚ್‌ಮನ್ ಕೆಲಸ ಮಾಡು ತ್ತಿದ್ದು, ತಾಯಿ ಪುಷ್ಪ ಮನೆ ಕೆಲಸ ಮಾಡುತ್ತಾರೆ ಎಂದು ಹೇಳುತ್ತಾನೆ.

ಆರತಿ ಉಕ್ಕಡದ ದಾರಿ ಹಿಡಿದು ಬಂದ ಈ ಮಕ್ಕಳಿಗೆ ಏನು ಮಾಡಬೇಕೆಂದು ತೋಚದೆ ಅಳುತ್ತ ನಿಂತಿದ್ದಾಗ ವ್ಯಾಪಾರಿ ಬಲರಾಂ ಊಟ ಹಾಕಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಈ ಮಕ್ಕಳ ಬಗ್ಗೆ ಮಾಹಿತಿ ನೀಡಿದ್ದೇವೆ ಎಂದು ಬಲರಾಂ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.