ADVERTISEMENT

'ಮಂಡ್ಯಕ್ಕೆ ಅನ್ನ ನೀಡಿದ್ದು ವಿಶ್ವೇಶ್ವರಯ್ಯ’

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 4:12 IST
Last Updated 16 ಸೆಪ್ಟೆಂಬರ್ 2013, 4:12 IST

ಮಂಡ್ಯ: ಭಾರತ ರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಅಂತಹವರನ್ನು ಇಂದಿನ ಯುವಕರು ಆದರ್ಶವಾಗಿಸಿಕೊಳ್ಳಬೇಕು ಎಂದು ವಿಧಾನ ಪರಿಷತ್‌್ ಸದಸ್ಯ ಅಶ್ವತ್ಥನಾರಾಯಣ ಹೇಳಿದರು.

ವಿಶ್ವೇಶ್ವರಯ್ಯ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವೇಶ್ವರಯ್ಯ ಅವರ 153ನೇ ಜನ್ಮ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಿನಿಮಾ ನಟರು ಹಾಗೂ ಕೆಟ್ಟ ಚಲನಚಿತ್ರಗಳು ಯುವಕರಿಗೆ ಆದರ್ಶವಾಗುತ್ತಿದ್ದಾರೆ. ನಾಡಿಗಾಗಿ ದುಡಿದವರು ಆದರ್ಶವಾಗುತ್ತಿಲ್ಲ ಎಂದು ವಿಷಾದಿಸಿದರು. ನಾಡಿಗಾಗಿ ದುಡಿದ ಮಹನೀಯರ ಬಗೆಗೆ ಇಂದಿನ ಯುವ ಜನಾಂಗಕ್ಕೆ ತಿಳಿಸಿಕೊಡುವ ಕೆಲಸವನ್ನು ಮಾಡಬೇಕಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಶಾಸಕ ಸಿ.ಎಸ್‌್್. ಪುಟ್ಟರಾಜು ಮಾತನಾಡಿ, ವಿಶ್ವೇಶ್ವರಯ್ಯ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌್್ ಮಂಡ್ಯ ಜಿಲ್ಲೆಯನ್ನು ಬೆಳಗಿದ ಮಹಾನುಭವರಾಗಿದ್ದಾರೆ. ಅಂತವರನ್ನು ಸ್ಮರಿಸುವ ಕೆಲಸವನ್ನು ಸದಾ ಮಾಡಬೇಕು ಎಂದರು.

ಯುವ ನಗರಸಭಾ ಸದಸ್ಯರಾಗಿರುವ ಕೆ.ಸಿ. ರವೀಂದ್ರ ಅವರು, ವಿವಿ ನಗರದ ಎಲ್ಲ ರಸ್ತೆಗಳಿಗೆ ಫಲಕಗಳನ್ನು ಅಳವಡಿಸುವ ಮೂಲಕ ವಾರ್ಡ್‌್ ಅಭಿವೃದ್ಧಿಗೆ ಮುಂದಾಗಿರುವುದು ಒಳ್ಳೆಯ ಕೆಲಸ ಎಂದು ಶ್ಲಾಘಿಸಿದರು.

ಇದೇ ಸಂದಭರ್ದಲ್ಲಿ ರಸ್ತೆಗಳಲ್ಲಿ ಅಳವಡಿಸಲು ತಂದಿರುವ ಫಲಕ ಅಳವಡಿಕೆಗೂ ಚಾಲನೆ ನೀಡಲಾಯಿತು. ಸಾಹಿತಿ ಮಾ.ರಾಮಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭಾ ಸದಸ್ಯರಾದ ಕೆ.ಸಿ. ರವೀಂದ್ರ, ಶಶಿಕುಮಾರ್‌, ಶಿವರತ್ನಮ್ಮ, ಮಾಜಿ ಸದಸ್ಯೆ ಕೆ.ಸಿ. ನಾಗಮ್ಮ, ಮುಖಂಡರಾದ ಎಚ್‌.ಪಿ. ಮಹೇಶ್‌, ಅಮರಾವತಿ ಚಂದ್ರಶೇಖರ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.