ADVERTISEMENT

ರಂಗದ ಕುಣಿತಕ್ಕೆ ಹೆಜ್ಜೆ ಹಾಕಿದ ಯುವಕರು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 10:59 IST
Last Updated 20 ಮಾರ್ಚ್ 2018, 10:59 IST
ಕಿಕ್ಕೇರಿಯಲ್ಲಿ ಸೋಮವಾರ ಜರುಗಿದ ರಂಗದ ಹಬ್ಬದಲ್ಲಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಿದರು
ಕಿಕ್ಕೇರಿಯಲ್ಲಿ ಸೋಮವಾರ ಜರುಗಿದ ರಂಗದ ಹಬ್ಬದಲ್ಲಿ ಗೆಜ್ಜೆ ಕಟ್ಟಿಕೊಂಡು ಹೆಜ್ಜೆ ಹಾಕಿದರು   

ಕಿಕ್ಕೇರಿ: ಯುಗಾದಿ ನಂತರ ಆರಂಭ ವಾಗುವ ಜಾತ್ರೆಯ ಸಡಗರಕ್ಕೆ ಸೋಮವಾರ ರಂಗನ ಕುಣಿತಕ್ಕೆ ಯುವಕರೊಂದಿಗೆ ಹಿರಿಯರು ಭಾಗಿಯಾಗಿ ಸಂಭ್ರಮಿಸಿದರು.

ಗ್ರಾಮೀಣ ಜನಪದ ಕಲೆಯಾದ ರಂಗದಕುಣಿತಕ್ಕೆ ತಮಟೆ ನಾದಕ್ಕೆ ಹೆಜ್ಜೆ ಹಾಕುತ್ತಾ ಕುಣಿಯಲು ಆರಂಭಿಸಿ ಸೈ ಸೈ ಎಂದು ಕೂಗಿದರು.

ಉಪ್ಪರಿಗೆ ಬಸವಣ್ಣನ ಗುಡಿಯಿಂದ ರಂಗನಕುಣಿತ ಆರಂಭವಾಯಿತು. ಯುವಕರು ರಥಬೀದಿಯಲ್ಲಿ ಸಾಗಿ ರಾಜ್ಯ ಹೆದ್ದಾರಿಯಲ್ಲಿ ಕೆಲಹೊತ್ತು ರಂಗ ಕುಣಿತದ ವಿವಿಧ ಮಟ್ಟು ಹಾಕಿದರು.

ADVERTISEMENT

ಹೊಸಬೀದಿಯಲ್ಲಿ ಸಾಗಿ, ಅರಳಿಕಟ್ಟೆ ಬಳಿ ವೃತ್ತ ನಿರ್ಮಿಸಿಕೊಂಡು ತಮಟೆ ನಾದಕ್ಕೆ ಕುಣಿಯುತ್ತ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದ ನಾಗರಿಕರಿಗೆ ಖುಷಿ ನೀಡಿದರು.

ಪಟ್ಟಣದ ಹೊರವಲಯದಲ್ಲಿರುವ ಕಿಕ್ಕೇರಮ್ಮ ದೇವಿಯ ಗುಡಿಯ ಬಳಿ ಅಂತಿಮವಾಗಿ ರಂಗನಕುಣಿತವನ್ನು ದೇವಿಗೆ ಅರ್ಪಿಸಿದರು. ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.