ಶ್ರೀರಂಗಪಟ್ಟಣ: ತಾಲ್ಲೂಕಿನ ಮಹದೇವಪುರ ಬೋರೆ ಗ್ರಾಮದ ಸುಭಾಷ್‌ಚಂದ್ರ ಮತ್ತು ರೇಖಾ ದಂಪತಿಯ ಪುತ್ರ ಕಾರ್ತಿಕ್ (29) ಅವರ ಮೆದುಳು ಅಪಘಾತದಿಂದಾಗಿ ನಿಷ್ಕ್ರಿಯಗೊಂಡಿದ್ದು, ಪೋಷಕರು ಆತನ ಅಂಗಾಂಗಳನ್ನು ಶುಕ್ರವಾರ ದಾನ ಮಾಡಿದ್ದಾರೆ.
ಕಾರ್ತಿಕ್ ಅವರ ಹೃದಯ, ಮೂತ್ರಪಿಂಡ, ಲಿವರ್, ಕಣ್ಣು ಹಾಗೂ ಇತರ ಅಂಗಾಂಗಳನ್ನು ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾನ ಮಾಡಿದ್ದಾರೆ.
ಜ.28 ರಂದು ಅರಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಿಸಿದ್ದನ ಹುಂಡಿ ಬಳಿ ಬೈಕ್‌ಗಳ ನಡುವೆ ನಡೆದ ಅಪಘಾತದಲ್ಲಿ ಗಾಯಗೊಂಡು ಕಾರ್ತಿಕ್ ಅವರ ಮಿದುಳು ಸಂಪೂರ್ಣ ನಿಷ್ಕ್ರಿಯಗೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.