ಪಾಂಡವಪುರ: ಆಡಳಿತ ಮಂಡಳಿ ಮತ್ತು ನೌಕರರು ಶಾಮೀಲಾಗಿ ಕೊಟ್ಯಂತರ ರೂಪಾಯಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಪಾಂಡವಪುರ ಕಸಬಾ ಸೊಸೈಟಿ ಹಗರಣದ ತನಿಖೆಯನ್ನು ಸರ್ಕಾರ ಇದೀಗ ಸಿಐಡಿಗೆ ವಹಿಸಿದೆ.
ಸೊಸೈಟಿಯಲ್ಲಿ ಒಂದೆರಡು ವರ್ಷಗಳ ಹಿಂದಿನಿಂದಲೂ ಭ್ರಷ್ಟಾಚಾರ ನಡೆಯುತ್ತಿರುವ ಸುಳಿವು ಸಿಕ್ಕಿತ್ತು. ಸೊಸೈಟಿ ನೌಕರರು ಮತ್ತು ಆಡಳಿತ ಮಂಡಳಿವರೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಸೊಸೈಟಿ ಷೇರುದಾರರು ಆರೋಪಿಸಿದ್ದರು.
ಕಡಿಮೆ ಬಡ್ಡಿಗೆ ಹಣ ದೊರೆಯುತ್ತದೆ ಎಂದು ಷೇರುದಾರರು ಸೊಸೈಟಿಯಲ್ಲಿ ಗಿರವಿ ಇಟ್ಟಿದ್ದ ಚಿನ್ನವನ್ನು ಆಡಳಿತ ಮಂಡಳಿಯ ಕೆಲವರು ಮತ್ತು ನೌಕರರು ಸೇರಿ ಬೇರೆ ಕಡೆಗೆ ಗಿರವಿ ಇಟ್ಟು ಹಣವನ್ನು ಪಡೆದುಕೊಂಡು ಭ್ರಷ್ಟಾಚಾರ ಎಸಗಿದ್ದಾರೆಂದು ಆರೋಪಿಸಲಾಗಿತ್ತು. ಈ ಬಗ್ಗೆ ಪಾಂಡವಪುರ ಪೊಲೀಸರು ಪ್ರಾಥಮಿಕ ತನಿಖೆ ನಡೆಸಿ ವರದಿಯನ್ನು ಸಿಐಡಿಗೆ ನೀಡಿದ್ದಾರೆ. ಇದೀಗ ಸಿಐಡಿ ಅಧಿಕಾರಿಗಳು ತನಿಖೆಗೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.