ADVERTISEMENT

‘ಜೀವರಾಶಿಗಳಿಗೆ ಪ್ರಕೃತಿಯೇ ಆಧಾರ’

ಅಂತರರಾಷ್ಟ್ರೀಯ ಜೀವವೈವಿಧ್ಯ ದಿನದಲ್ಲಿ ಕೆ.ಟಿ.ಹನುಮಂತು

​ಪ್ರಜಾವಾಣಿ ವಾರ್ತೆ
Published 23 ಮೇ 2022, 3:08 IST
Last Updated 23 ಮೇ 2022, 3:08 IST
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಗೆ ಶಾಸಕ ಎಂ.ಶ್ರೀನಿವಾಸ್‌ ಚಾಲನೆ ನೀಡಿದರು. ಕೆ.ಟಿ.ಹನುಮಂತು, ಮೋಹನ್‌ ಕುಮಾರ್‌, ಡೇವಿಡ್‌ ಇದ್ದರು
ಮಂಡ್ಯ ನಗರದಲ್ಲಿ ಆಯೋಜಿಸಿದ್ದ ಅಂತರ ರಾಷ್ಟ್ರೀಯ ಜೀವವೈವಿಧ್ಯ ದಿನಾಚರಣೆಗೆ ಶಾಸಕ ಎಂ.ಶ್ರೀನಿವಾಸ್‌ ಚಾಲನೆ ನೀಡಿದರು. ಕೆ.ಟಿ.ಹನುಮಂತು, ಮೋಹನ್‌ ಕುಮಾರ್‌, ಡೇವಿಡ್‌ ಇದ್ದರು   

ಮಂಡ್ಯ: ಜೀವರಾಶಿಗಳಿಗೆ ಪ್ರಕೃತಿಯೇ ಆಧಾರ. ಪ್ರಕೃತಿ ಮತ್ತು ಜೀವರಾಶಿಗಳ ಅಸಮತೋಲನ ಉಂಟಾದರೆ ಮನುಕುಲ ನಾಶವಾಗುತ್ತದೆ ಎಂದು ಕೃಷಿಕ ಲಯನ್ಸ್ ಸಂಸ್ಥೆ ಆಳಿತಾಧಿಕಾರಿ ಕೆ.ಟಿ.ಹನುಮಂತು ಹೇಳಿದರು.

ನಗರದ ಜಿಲ್ಲಾ ಕಾರಾಗೃಹದ ಮುಂಭಾಗ ಕೃಷಿಕ ಲಯನ್ಸ್‌ ಸಂಸ್ಥೆ, ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಜೀವವೈವಿಧ್ಯ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಸಂಸ್ಥೆಯು ಮೇ 22ರಂದು ಜೀವ ವೈವಿಧ್ಯ ದಿನ ಆಚರಿಸುತ್ತಿದೆ. ‘ಜೀವಿಗಳೊಡನೆ ಭವಿಷ್ಯ ಹಂಚಿಕೊಳ್ಳುವತ್ತ ಜೀವಿಗಳನ್ನು ನಾಶಮಾಡದೆ ಹಾಗೇ ಉಳಿಸುತ್ತಿರಿ’ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಶಾಸಕ ಎಂ.ಶ್ರೀನಿವಾಸ್ ಮಾತನಾಡಿ, ಈ ಅಭಿಯಾನವು ಎಲ್ಲ ಗ್ರಾಮ ಪಂಚಾಯಿತಿಗಳಲ್ಲೂ ನಡೆಯಬೇಕು. ಇದರಿಂದ ಗ್ರಾಮೀಣ ಭಾಗದ ಜನರಿಗೆ ಸಹಕಾರಿ ಆಗುತ್ತದೆ ಎಂದರು.

ಕೃಷಿಕ ಲಯನ್ಸ್ ಸಂಸ್ಥೆಯ ಉಪಾಧ್ಯಕ್ಷ ಮೋಹನ್‌ ಕುಮಾರ್ ಮಾತನಾಡಿದರು.

ಜಿಲ್ಲಾ ಕಾರಾಗೃಹ ಅಧೀಕ್ಷಕ ಟಿ.ಕೆ.ಲೋಕೇಶ್, ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.