ADVERTISEMENT

ಮಿಮ್ಸ್‌: ಬೀದಿನಾಯಿಗಳಿಗೂ ಹಾಸಿಗೆ!

ನಗರದ ಜಿಲ್ಲಾಸ್ಪತ್ರೆಯಲ್ಲಿ (ಮಿಮ್ಸ್‌) ವೈದ್ಯರು ಬೆಡ್‌ ಕೊರತೆಯ ನೆಪ ಹೇಳಿ ರೋಗಿಗಳನ್ನು ವಾಪಸ್‌ ಕಳುಹಿಸುತ್ತಾರೆ. ಆದರೆ ಬೀದಿನಾಯಿಗಳಿಗೆ ಬೆಡ್‌ ಕೊಟ್ಟು ಮಲಗಿಸುತ್ತಾರೆ!

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 12:12 IST
Last Updated 22 ಅಕ್ಟೋಬರ್ 2020, 12:12 IST
ಮಿಮ್ಸ್‌ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಬೀದಿನಾಯಿಗಳು ಆಶ್ರಯ ಪಡೆದಿರುವುದು
ಮಿಮ್ಸ್‌ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಬೀದಿನಾಯಿಗಳು ಆಶ್ರಯ ಪಡೆದಿರುವುದು   

ಮಂಡ್ಯ: ನಗರದ ಜಿಲ್ಲಾಸ್ಪತ್ರೆಯಲ್ಲಿ (ಮಿಮ್ಸ್‌) ವೈದ್ಯರು ಬೆಡ್‌ ಕೊರತೆಯ ನೆಪ ಹೇಳಿ ರೋಗಿಗಳನ್ನು ವಾಪಸ್‌ ಕಳುಹಿಸುತ್ತಾರೆ. ಆದರೆ ಬೀದಿನಾಯಿಗಳಿಗೆ ಹಾಸಿಗೆ ಕೊಟ್ಟು ಮಲಗಿಸುತ್ತಾರೆ!

ಮಿಮ್ಸ್‌ ಆಸ್ಪತ್ರೆಯ ಹೆರಿಗೆ ವಾರ್ಡ್‌ನಲ್ಲಿ ಬೀದಿನಾಯಿಗಳು ಸಾಲಾಗಿ ಮಲಗಿರುವ ವಿಡಿಯೊ, ಛಾಯಾಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ತಕ್ಷಣ ವಿಡಿಯೊ, ಚಿತ್ರ ನೋಡಿದರೆ ಇದು ಯಾವುದೇ ಪಶು ಆಸ್ಪತ್ರೆ ಇರಬಹುದು ಎನಿಸುತ್ತದೆ. ಆದರೆ ಇದು ಮಿಮ್ಸ್‌ ಆಸ್ಪತ್ರೆ ಎಂದು ತಿಳಿದರೆ ಆಶ್ಚರ್ಯವಾಗುತ್ತದೆ.

ಜಿಲ್ಲಾಸ್ಪತ್ರೆಯನ್ನು ಕೋವಿಡ್‌ ಆಸ್ಪತ್ರೆ ಎಂದು ಘೋಷಣೆ ಮಾಡಲಾಗಿದ್ದು 400 ಹಾಸಿಗೆಗಳನ್ನು ಕೋವಿಡ್‌–19 ರೋಗಿಗಳಿಗೆ ಮೀಸಲಿಡಲಾಗಿದೆ. ಅನ್ಯ ಕಾಯಿಲೆಗಳ ರೋಗಿಗಳಿಗೆ ಬೆಡ್‌ ಕೊರತೆ ಉಂಟಾಗಿದ್ದು ವೈದ್ಯರು ಅವರನ್ನು ವಾಪಸ್‌ ಕಳುಹಿಸುತ್ತಿದ್ದಾರೆ. ಆದರೆ ವಾರ್ಡ್‌ನಲ್ಲಿ ಬೀದಿನಾಯಿಗಳು ಆಶ್ರಯ ಪಡೆದಿರುವುದು ಅನುಮಾನಕ್ಕೆ ಕಾರಣವಾಗಿದೆ.

ADVERTISEMENT

ಇದಕ್ಕೆ ಮಿಮ್ಸ್‌ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ.ಹರೀಶ್‌ ಸ್ಪಷ್ಟನೆ ನೀಡಿದ್ದು, ಹಳೆಯ ವಿಡಿಯೊ, ಛಾಯಾಚಿತ್ರಗಳನ್ನು ವೈರಲ್‌ ಮಾಡಿದ್ದಾರೆ. ಹೆರಿಗೆ ವಾರ್ಡ್‌ ಸ್ವಚ್ಛವಾಗಿದ್ದು ನಾಯಿಗಳು ಮಲಗುವ ಪರಿಸ್ಥಿತಿ ಇಲ್ಲ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.