ADVERTISEMENT

ದಸರಾ: ಕಂಗೊಳಿಸುತ್ತಿದೆ ಮೈಸೂರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2012, 5:50 IST
Last Updated 12 ಅಕ್ಟೋಬರ್ 2012, 5:50 IST
ದಸರಾ: ಕಂಗೊಳಿಸುತ್ತಿದೆ ಮೈಸೂರು
ದಸರಾ: ಕಂಗೊಳಿಸುತ್ತಿದೆ ಮೈಸೂರು   

ಮೈಸೂರು: ದೀಪಗಳ ಹಬ್ಬ ದೀಪಾವಳಿಗಿಂತಲೂ ದಸರಾ ದೀಪಾಲಂಕಾರ ಅತ್ಯಾಕರ್ಷಕ. ಇದಕ್ಕೆ ಇಂಬು ನೀಡುವಂತೆ ಈ ಬಾರಿ ಮೈಸೂರಿನಲ್ಲಿ ವಿದ್ಯುತ್ ದೀಪಗಳ ಚಿತ್ತಾರದಲ್ಲಿ ಅರಳಲಿರುವ ನರ್ತಕಿಯರು ಪ್ರವಾಸಿಗರನ್ನು ಸ್ವಾಗತಿಸಲಿದ್ದಾರೆ.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ದಸರಾ ದೀಪಾಲಂಕಾರ ಉಪ ಸಮಿತಿ ಅಧ್ಯಕ್ಷ ಟಿ.ರಮೇಶ್, `ನಾಡಹಬ್ಬದ ದೀಪಾಲಂಕಾರವನ್ನು ಪ್ರತಿ ವರ್ಷದಂತೆ ಈ ವರ್ಷವೂ ಜಂಬೂಸವಾರಿ ಮಾರ್ಗ ಹಾಗೂ ನಗರದ ಹೃದಯ ಭಾಗದಲ್ಲಿರುವ ಪ್ರಮುಖ ರಸ್ತೆಗಳು ಹಾಗೂ ವೃತ್ತಗಳಲ್ಲಿ ಮಾಡಲಾಗುತ್ತಿದೆ. ಅದರಲ್ಲೂ ಕೆ.ಆರ್.ವೃತ್ತದಲ್ಲಿ ವಿಶೇಷ ಅಲಂಕಾರ ಮಾಡಲಾಗುತ್ತಿದೆ~ ಎಂದು ಹೇಳಿದರು.

`ಸರ್ ಎಂ.ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಜಯಚಾಮರಾಜೇಂದ್ರ ಒಡೆಯರ್, ಚಾಮುಂಡೇಶ್ವರಿ ದೇವಿಯನ್ನು ವಿದ್ಯುತ್ ದೀಪಾಲಂಕಾರದಲ್ಲಿ ಸೃಷ್ಟಿಸಲಾಗುತ್ತಿದೆ. `ಓಂ~ ಹಾಗೂ `ಸ್ವಾಗತ~ ಫಲಕಗಳನ್ನೂ ದೀಪಾಲಂಕಾರದಲ್ಲಿ ಮಾಡಲಾಗುತ್ತದೆ. ನಗರದ ಪ್ರಮುಖ ವಾಣಿಜ್ಯ ಕಟ್ಟಡಗಳು, ಸರ್ಕಾರಿ ಕಚೇರಿಗಳು, ದೇವಸ್ಥಾನ, ಮಸೀದಿ, ಚರ್ಚ್ ಹಾಗೂ ಇತರೆಡೆಯೂ ವಿದ್ಯುತ್ ದೀಪಾಲಂಕಾರ ಮಾಡಲಾಗುವುದು~ ಎಂದರು.

`ಕಳೆದ ವರ್ಷ ರೂ. 75 ಲಕ್ಷ ರೂಪಾಯಿ ವೆಚ್ಚ ಮಾಡಲಾಗಿದ್ದು, ಈ ವರ್ಷ ರೂ. 65 ಲಕ್ಷ ವೆಚ್ಚದಲ್ಲಿ ದೀಪಾಲಂಕಾರ ಪೂರ್ಣಗೊಳ್ಳಲಿದೆ. ವಿದ್ಯುತ್ ದೀಪಗಳ ಸಂಪರ್ಕ ಭಾರವನ್ನು 2500 ಕಿ.ವಾಟ್‌ನಿಂದ 1500 ಕಿ.ವಾಟ್‌ಗೆ ಇಳಿಕೆ ಮಾಡಲಾಗಿದ್ದು, ವಿದ್ಯುತ್ ಬಳಕೆ ಪ್ರಮಾಣ 0.8 ಲಕ್ಷ ಯೂನಿಟ್ ಆಗಬಹುದು ಎಂದು ಅಂದಾಜಿಸಲಾಗಿದೆ. ಸಿಎಫ್‌ಎಲ್/ಎಲ್‌ಸಿಡಿ ಬಲ್ಬ್‌ಗಳನ್ನು ಹೆಚ್ಚು ಬಳಸುತ್ತಿರುವುದರಿಂದ ಸಾಕಷ್ಟು ವಿದ್ಯುತ್ ಉಳಿತಾಯವಾಗಲಿದೆ~ ಎಂದು ತಿಳಿಸಿದರು.

ಮೈಸೂರು ದಸರಾ: ಗೆಟಿಟ್‌ನಿಂದ ವಿಶೇಷ ವೆಬ್‌ಸೈಟ್
ದಸರಾ ಉತ್ಸವದ ಅಂಗವಾಗಿ  ಡಿಜಿಟಲ್ ಮಾರುಕಟ್ಟೆ ಕಂಪೆನಿಯಾಗಿರುವ ಗೆಟಿಟ್ ಇನ್ಫೋಸರ್ವಿಸಸ್  ವೆಬ್‌ಸೈಟ್‌ಗೆ ಚಾಲನೆ ನೀಡಿದೆ.

ಈ ವೆಬ್‌ಸೈಟ್‌ನಲ್ಲಿ ನಿಮ್ಮ ಆತ್ಮೀಯರೊಂದಿಗೆ ಹರಟೆ ಹೊಡೆಯುವುದರ ಜೊತೆಗೆ, ಉಡುಗೊರೆ ವಿನಿಮಯ, ಶಾಪಿಂಗ್, ವೀಡಿಯೋ ಮತ್ತು ಆನ್‌ಲೈನ್ ಸ್ಪರ್ಧೆಗಳಲ್ಲಿಯೂ ಪಾಲ್ಗೊಳ್ಳಬಹುದು.

http://mysoredasara.getit.in ವೆಬ್‌ಸೈಟ್‌ನಲ್ಲಿ ಮೈಸೂರು ದಸರಾ ಉತ್ಸವದ ಬಗ್ಗೆ ವಿಶೇಷ ಮಾಹಿತಿ ಒದಗಿಸಲಾಗುತ್ತಿದೆ.  ಹೂಗುಚ್ಛ, ಸಿಹಿ ತಿನಿಸುಗಳು ಮತ್ತು ಉಡುಗೊರೆಗಳನ್ನೂ ಕುಟುಂಬದ ಸದಸ್ಯರಿಗೆ ಅಥವಾ ಸ್ನೇಹಿತರಿಗೆ ಕಳಿಸ ಬಹುದು. ತಮ್ಮ ವಿಡಿಯೋ ಮತ್ತು ಚಿತ್ರಗಳನ್ನೂ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಬಹುದು.

ದಸರಾ ನೋಡಲು ಟ್ರಾವೆಲ್ ಡೀಲ್‌ಗಳು ಮತ್ತು ಆಕರ್ಷಕ ಪ್ರವಾಸ ಪ್ಯಾಕೇಜ್‌ಗಳೂ ಇದರಲ್ಲಿ ಲಭ್ಯವಿದೆ. ಕನ್ನಡದ ನೆಲದ ತಿನಿಸುಗಳನ್ನು ಹೇಗೆ ತಯಾರಿಸಬಹುದು ಎಂಬ ವಿವರ ಇದೆ.

ದಸರಾ ಮತ್ತು ಮೈಸೂರಿನ ಬಗ್ಗೆ ಯಾವುದೇ ಮಾಹಿತಿಯನ್ನೂ 4444 4444 ಈ ಸಂಖ್ಯೆಗೆ ಕರೆ ಮಾಡಿ ಗೆಟಿಟ್‌ನಿಂದ ಪಡೆಯಬಹುದು ಎಂದು ಗೆಟಿಟ್ ಇನ್ಫೋಸರ್ವಿಸಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿದ್ಧಾರ್ಥ ಗುಪ್ತಾ ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.