ADVERTISEMENT

‘ಪಕ್ಷ ಸಂಘಟನೆಗೆ ಒತ್ತು ನೀಡಿ’

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2018, 13:43 IST
Last Updated 2 ಏಪ್ರಿಲ್ 2018, 13:43 IST

ಸರಗೂರು: ‘ರಾಜ್ಯ ಕಾಂಗ್ರೆಸ್ ಆಡಳಿತದ 5 ವರ್ಷಗಳ ಅವಧಿಯಲ್ಲಿ ಆಗಿರುವ ಅಭಿವೃದ್ದಿ ಕಾಮಗಾರಿ ಮುಂದಿಟ್ಟು ಕೊಂಡು ಧೈರ್ಯವಾಗಿ ಚುನಾವಣೆ ಎದುರಿಸಬಹುದು’ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.ತಾಲ್ಲೂಕಿನ ಚಿಕ್ಕದೇವಮ್ಮ ಬೆಟ್ಟದಲ್ಲಿ ಭಾನುವಾರ ಅನಿಲ್ ಚಿಕ್ಕಮಾದು, ಡಾ.ಯತೀಂದ್ರ ಅವರೊಂದಿಗೆ ಪೂಜೆ ಸಲ್ಲಿಸಿದ ನಂತರ ನಡೆದ ಸಭೆಯಲ್ಲಿ ಅವರು ಮಾತನಾಡಿದರು.‘ಕ್ಷೇತ್ರದಿಂದ ಅನಿಲ್ ಚಿಕ್ಕಮಾದು ಅವರಿಗೆ ಈ ಬಾರಿ ಟಿಕೆಟ್ ನೀಡಲಾಗು ತ್ತದೆ. ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಿಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲವು ಅಭ್ಯರ್ಥಿಗಳ ಹೆಸರು ಘೋಷಿಸಿದ್ದಾರೆ. ಹೀಗಾಗಿ, ಪಕ್ಷ ಸಂಘಟನೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಅಭ್ಯರ್ಥಿ ಪರಿಚಯಿಸಬೇಕೆಂಬ ದೃಷ್ಟಿಯಿಂದ ಮನುಗನಹಳ್ಳಿ, ಕಲ್ಲಂಬಾಳು, ಮುಳ್ಳೂರು, ಹಾದನೂರು ಮತ್ತು ಎಂ.ಸಿ. ತೊಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಚಾರ ನಡೆಸಲಾಗುತ್ತಿದೆ. ಈ ಬಾರಿ ಅಭ್ಯರ್ಥಿ ಬಗ್ಗೆ ಗೊಂದಲ ಬೇಡ. ಅವರಿಗೆ ಪಕ್ಷ ಹೊಸದು. ಕಾರ್ಯಕ್ರಮಕ್ಕೆ ಕರೆದಿಲ್ಲ ಎಂಬ ಭಾವನೆ ಯಾರಿಗೂ ಬೇಡ’ ಎಂದರು.‘ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿಕೆಗಳು ಬರೀ ಸುಳ್ಳು. ಅವರ ಹೇಳಿಕೆಗಳಲ್ಲಿ ಯಾವ ಅಂಕಿಅಂಶ ಇಲ್ಲ. ರಾಜ್ಯವು ಅಭಿವೃದ್ಧಿ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕೊಲೆ, ಸುಲಿಗೆ, ಹತ್ಯೆ ಪ್ರಕರಣಗಳು ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೇ ಹೆಚ್ಚು, ಕರ್ನಾಟಕದಲ್ಲಿ ಅಲ್ಲ’ ಎಂದು ಹೇಳಿದರು.

ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ‘ರಾಜ್ಯದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇಲ್ಲ. ಬಿಜೆಪಿಯವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ’ ಎಂದು ದೂರಿದರು.ಅನಿಲ್ ಚಿಕ್ಕಮಾದು ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.

ADVERTISEMENT

ಜಿಲ್ಲಾ ಪಂಚಾಯಿತಿ ಸದಸ್ಯರಾದ ಶ್ರೀಕೃಷ್ಣ, ನಂದಿನಿ ಚಂದ್ರಶೇಖರ್, ಪಿ.ರವಿ, ಸುರೇಂದ್ರ ಡಿ.ಗೌಡ, ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮನುಗನಹಳ್ಳಿ ಮಾದಪ್ಪ, ಏಜಾಜ್ ಪಾಷಾ, ಮುಖಂಡರಾದ ಎಸ್.ವಿ.ವೆಂಕಟೇಶ್, ಕೋಟೆ ಶಿವಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಜಯಮಂಗಳ, ಜ್ಯೋತಿ ಯೋಗೀಶ್, ಎಸ್.ಎಸ್.ಪ್ರಭುಸ್ವಾಮಿ, ಜಿ.ವಿ.ಸೀತಾರಾಮ್, ಶ್ರೀನಿವಾಸ್, ಶಂಭುಲಿಂಗನಾಯಕ, ಡಿಸಿಸಿ ಸದಸ್ಯ ಪರಶಿವಮೂರ್ತಿ, ಅಂಕನಾಯಕ, ಎಚ್.ಸಿ.ಶಿವಣ್ಣ, ಬಿ.ಸಿ.ಬಸಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.