ಸರಗೂರು: ಪಟ್ಟಣ ಹಾಗೂ ನಗರ ಪ್ರದೇಶಗಳು ಸ್ವಚ್ಛವಾಗಿರಲು ಪೌರ ಕಾರ್ಮಿಕರೇ ಕಾರಣ. ಈ ದೃಷ್ಟಿಯಲ್ಲಿ ಪೌರ ಕಾರ್ಮಿಕರ ಸೇವೆ ಸಾರ್ಥಕವಾದುದು ಎಂದು ಪಟ್ಟಣ ಪಂಚಾಯಿತಿ ಎಂಜನಿಯರ್ ಸತ್ಯಕುಮಾರ್ ಹೇಳಿದರು.
ಸರಗೂರು ಪಟ್ಟಣ ಪಂಚಾಯಿತಿಯಲ್ಲಿ ಬುಧವಾರ ನಡೆದ ಪೌರ ಕಾರ್ಮಿಕರ ದಿನಾಚರಣೆ ಹಾಗೂ ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಅವರು, ಹತ್ತು ವರ್ಷದ ಹಿಂದೆ ಪೌರ ಕಾರ್ಮಿಕರ ಸ್ಥಿತಿ ಶೋಚನೀಯವಾಗಿತ್ತು.
ಅವರನ್ನು ಮುಖ್ಯವಾಹಿನಿಗೆ ತರಲು ಸರ್ಕಾರ ಪೌರಕಾರ್ಮಿಕರ ದಿನಾಚರಣೆಯನ್ನು ಜಾರಿಗೆ ತಂದಿದೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಬೆಳಗಮ್ಮ ರಂಗಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪೌರ ಕಾರ್ಮಿಕರಿಗೆ ಸರ್ಕಾರದಿಂದ ಬರುವ ಸೌಲಭ್ಯಗನ್ನು ದೊರಕಿಸಲು ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಹೇಳಿದರು.
ಇದಕ್ಕೂ ಪ.ಪಂ. ಮುಖ್ಯಾಧಿಕಾರಿ ಜಹೀರ್‌ಅಬ್ಬಾಸ್ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು. ಇದೇ ವೇಳೆ 13 ಮಂದಿ ಪೌರ ಕಾರ್ಮಿಕರನ್ನು ಪಟ್ಟಣ ಪಂಚಾಯಿತಿ ವತಿಯಿಂದ ಸನ್ಮಾನಿ ಸಲಾಯಿತು. ರಾಜು, ಬಣ್ಣಾರಿ, ಚಿನ್ನಸ್ವಾಮಿ, ರಂಗ, ಸುಬ್ರಹ್ಮಣ್ಯ, ರಂಗನಾಥ, ಕಣ್ಣಮ್ಮ, ಮಾಗಾಳಮ್ಮ, ನಂಜಮ್ಮ, ಕರ್ಪ, ಎಸ್.ಆರ್. ರಾಜ, ಆರ‌್ಮುಗ, ರಾಚ ಸನ್ಮಾನ ಸ್ವೀಕರಿಸಿದರು.
ಪೌರ ಸೇವಾ ನೌಕರರ ಸಂಘದ ಅಧ್ಯಕ್ಷ ಪಳನಿಸ್ವಾಮಿಮಾತನಾಡಿದರು. ಪ.ಪಂ. ಉಪಾಧ್ಯಕ್ಷ ನಾಗರಾಜರಾಮ, ಸದಸ್ಯ ಜಯರಾಮ, ಪದ್ಮ ಶ್ರೀನಿವಾಸ್, ಸುನಂದರಾಜು, ರೂಪನೇಮೀಶ್, ಮಾಜಿ ಸದಸ್ಯ ಶ್ರೀನಿವಾಸ್, ರಂಗಯ್ಯ, ಮಹೇಂದ್ರಕುಮಾರ್, ಎಸ್.ಆರ್. ಸುರೇಶ್, ಆರೋಗ್ಯಾಧಿಕಾರಿ ನೇತ್ರಾವತಿ, ನೋಡಲ್ ಅಧಿಕಾರಿ ರಘು, ಕಂದಾಯ ಅಧಿಕಾರಿ ಎಚ್.ಪಿ. ಪ್ರಭಾ, ಲೆಕ್ಕಾಧಿಕಾರಿ ಸೌಮ್ಯ, ಬಸವರಾಜು, ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಪಳಿನಿಸ್ವಾಮಿ, ಉಪಾಧ್ಯಕ್ಷ ಬಸೀರ್, ಕಾರ್ಯದರ್ಶಿ ಕೆ.ಪಿ. ಲೋಕೇಶ್, ಸತೀಶ್, ಜವರಾಜಪ್ಪ, ವರದರಾಜು, ಚಿಕ್ಕಬಣ್ಣಾರಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.