ಮೈಸೂರು: ಮಳೆ ಅನಾಹುತ ನಿರ್ವಹಣೆಗೆ ಮಹಾನಗರ ಪಾಲಿಕೆ ಮೂರು `ಕ್ಷಿಪ್ರ ಕಾರ್ಯಪಡೆ' ರಚಿಸಿದ್ದು, ಸಂಜೆ 6ರಿಂದ ಬೆಳಿಗ್ಗೆ 6 ಗಂಟೆಯವರೆಗೆ ತುರ್ತು ಸಂದರ್ಭದಲ್ಲಿ ಕಾರ್ಯನಿರ್ವಹಿಸಲಿವೆ.
ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಾಲಿಕೆ ಈ ಕ್ರಮ ಕೈಗೊಂಡಿದೆ. ಗಾಳಿಯ ರಭಸಕ್ಕೆ ಉರುಳಿಬಿದ್ದ ಮರಗಳನ್ನು ತೆರವುಗೊಳಿಸುವುದು. ತಗ್ಗು ಪ್ರದೇಶಗಳಿಗೆ ನುಗ್ಗುವ ನೀರಿನಿಂದ ಉಂಟಾಗುವ ಸಮಸ್ಯೆಗಳನ್ನು ಪರಿಹರಿಸು ವುದು. ಮಳೆ ಸುರಿಯುವ ಸಂದರ್ಭದಲ್ಲಿ ಕಟ್ಟಿಕೊಂಡ ಚರಂಡಿಗಳನ್ನು ಶುಚಿಗೊಳಿಸು ವುದು ಸೇರಿದಂತೆ ಅನೇಕ ಕೆಲಸಗಳನ್ನು ಕೈಗೊಳ್ಳಲಿದೆ. ವಿದ್ಯುತ್ ಕಂಬಗಳಿಗೆ ತೊಂದರೆ ಉಂಟು ಮಾಡುವ ಮರದ ಕೊಂಬೆಗಳನ್ನು ಕೂಡ ತಂಡ ಕಟಾವು ಮಾಡುತ್ತವೆ.
ಮೂರು ತಂಡಗಳನ್ನು ಕ್ಷೇತ್ರವಾರು ವಿಂಗಡನೆ ಮಾಡಲಾಗಿದ್ದು, ನಗರದ ಚಾಮರಾಜ, ಕೃಷ್ಣರಾಜ ಹಾಗೂ ನರಸಿಂಹರಾಜ ಕ್ಷೇತ್ರಗಳಲ್ಲಿ ಕಾರ್ಯನಿರ್ವ ಹಿಸಲಿವೆ. ಪ್ರತಿ ತಂಡದಲ್ಲಿ ವಾರ್ಡ್ ವ್ಯಾಪ್ತಿಯ ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್, ಆರೋಗ್ಯ ಪರಿವೀಕ್ಷಕ ಹಾಗೂ ಗ್ಯಾಂಗ್‌ಮನ್‌ಗಳು ಇರುತ್ತಾರೆ. ಒಂದು ವಾಹನ, ಎಲೆಕ್ಟ್ರಿಕ್ ಕಟ್ಟರ್, ಮರ ಕಟಾವು ಯಂತ್ರ, ಜಟ್ಟಿಂಗ್ ಯಂತ್ರ ಸೇರಿದಂತೆ ಅಗತ್ಯ ಉಪಕರಣಗಳನ್ನು ಒದಗಿಸಲಾಗಿದೆ. ಮಳೆಯಿಂದ ಸಮಸ್ಯೆ ತಲೆದೋರಿದರೆ ದೂ. 0821- 2440891, 2440892 (ನಿಯಂತ್ರಣಾ ಕೊಠಡಿ) ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಕೃಷ್ಣರಾಜ ಪಾಲಿಕೆಯ ಮುಖ್ಯ ಕಚೇರಿ
0821- 2418800,
ಸಯ್ಯಾಜಿರಾವ್ ರಸ್ತೆ 2418816, 2431112
ಚಾಮರಾಜ ವಲಯ ಕಚೇರಿ-6
ಶೇಷಾದ್ರಿ ಅಯ್ಯರ್ ರಸ್ತೆ 2418800
ನರಸಿಂಹರಾಜ ವಲಯ ಕಚೇರಿ-7
ಎಫ್‌ಟಿಎಸ್ ವೃತ್ತ 2418823
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.