ADVERTISEMENT

ಮಹಾಕವಿ ಕುಮಾರವ್ಯಾಸ ವಿಚಾರಗೋಷ್ಠಿ ನಾಳೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 9:20 IST
Last Updated 8 ಅಕ್ಟೋಬರ್ 2011, 9:20 IST

ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಮಹಾಕವಿ ಕುಮಾರವ್ಯಾಸ ಕುರಿತ ವಿಚಾರಗೋಷ್ಠಿಯನ್ನು ಜೆಎಲ್‌ಬಿ ರಸ್ತೆಯ ಎಂಜಿನಿಯರುಗಳ ಸಂಸ್ಥೆಯಲ್ಲಿ ಅ. 9ರಂದು ಬೆಳಿಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ.

ಕಸಾಪ ರಾಜ್ಯಾಧ್ಯಕ್ಷ ಡಾ.ಆರ್.ಕೆ.ನಲ್ಲೂರು ಪ್ರಸಾದ್ ವಿಚಾರಗೋಷ್ಠಿಯನ್ನು ಉದ್ಘಾಟಿಸುವರು. ಸಾಹಿತಿ ಡಾ.ದೇಜಗೌ ಅಧ್ಯಕ್ಷತೆ ವಹಿಸಲಿದ್ದು, ಹಿರಿಯ ವಿದ್ವಾಂಸ ಡಾ. ಮಳಲಿ ವಸಂತ್‌ಕುಮಾರ್, ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಭಾಗವಹಿಸುವರು.

ಕುಮಾರವ್ಯಾಸನಲ್ಲಿ ಪ್ರಕೃತಿ ಮತ್ತು ಮಾನವ ಪ್ರಕೃತಿ ಕುರಿತು ವಿಮರ್ಶಕ ಮಂಜುನಾಥ್ ಬೆಳವಾಡಿ, ಕುಮಾರವ್ಯಾಸನ ಆಧ್ಯಾತ್ಮಿಕ ದೃಷ್ಟಿ ಬಗ್ಗೆ ವಿದ್ವಾನ್ ಎಚ್.ವಿ.ನಾಗರಾಜ್‌ರಾವ್, ಕುಮಾರವ್ಯಾಸನ ಜೀವನ ದರ್ಶನ ಕುರಿತು ಕನ್ನಡ ಉಪನ್ಯಾಸಕ ಡಾ.ಟಿ.ಕೆ.ಕೆಂಪೇಗೌಡ, ರೂಪಕಗಳ ಮೋಡಿಗಾರ ಕುಮಾರ ವ್ಯಾಸ ಎಂಬ ವಿಷಯದ ಬಗ್ಗೆ ಡಾ. ನಾಗಲಾಂಬಿಕ ವಿಷಯ ಮಂಡಿಸುವರು.

ಸಂಜೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಂಗೀತ ವಿ.ವಿ ಪ್ರಸಾರಾಂಗ ನಿರ್ದೇಶಕ ಡಾ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಸಮಾರೋಪ ಭಾಷಣ ಮಾಡುವರು. ಹಿರಿಯ ವಿದ್ವಾಂಸ ಪ್ರೊ.ಕೆ.ಭೈರವಮೂರ್ತಿ, ಸಾಹಿತಿ ಡಾ.ಎನ್.ಕೆ. ರಾಮಶೇಷನ್, ಸಂಗೀತ ವಿ.ವಿ ಕುಲಸಚಿವ ಡಾ.ನೀಲಗಿರಿ ಎಂ.ತಳವಾರ್ ಭಾಗವಹಿಸಲಿದ್ದಾರೆ ಎಂದು ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಚಂದ್ರಶೇಖರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.