ADVERTISEMENT

ಸಾಧಿಸಿದ್ದು ಸಾಕಷ್ಟು, ಇನ್ನು ಇದೆ ಬಹಳಷ್ಟು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 9:25 IST
Last Updated 18 ಅಕ್ಟೋಬರ್ 2011, 9:25 IST

ಹುಣಸೂರು: ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ವಿವಿಧ ಯೋಜನೆ ಅಡಿಯಲ್ಲಿ ರೂ. 170 ಕೋಟಿ ಅನುದಾನ ತಂದ ಸಮಾಧಾನ ವಿದ್ದರೂ ತೃಪ್ತಿ ನೀಡಿಲ್ಲ ಎಂದು ಶಾಸಕ ಎಚ್.ಪಿ.ಮಂಜುನಾಥ್ ಹೇಳಿದರು.

ವರದಿಗಾರರ ಒಕ್ಕೂಟ ಸೋಮ ವಾರ ಏರ್ಪಡಿಸಿದ್ದ  ಸಂವಾದ ಕಾರ್ಯ ಕ್ರಮದಲ್ಲಿ ಮಾತನಾಡಿ, ಮೂರು ವರೆ ವರ್ಷದ ಅವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆ ಮತ್ತು ವೈಯಕ್ತಿಕ ಆಸಕ್ತಿ ಯಿಂದ ಯೋಜನೆಗಳು ಅನುಷ್ಟಾನ ಗೊಂಡಿವೆ. ಪಟ್ಟಣದ ಅಭಿವೃದ್ಧಿಗೆ ರೂ. 66.36 ಕೋಟಿ ಅನುದಾನ ಹರಿದು ಬಂದಿದೆ.

ಹಲವಾರು ಅಭಿವೃದ್ಧಿ ಕನಸು ಕಂಡಿದ್ದರೂ ಸ್ಪಂದಿಸುವ ಸರ್ಕಾರವಿಲ್ಲದೆ ನನ್ನ ಕನಸು ಸಂಪೂರ್ಣ ನನಸಾಗುತ್ತಿಲ್ಲ ಎಂಬ ಬೇಸರವಿದೆ ಎಂದರು.

ತಾಲ್ಲೂಕಿನ ಹನಗೋಡು, ಕರಿಮುದ್ದನಹಳ್ಳಿ ಮತ್ತು ಹುಣಸೂರಿನಲ್ಲಿ ಅರ್ಧಕ್ಕೆ ನಿಂತ ಕಾಲೇಜು ಕಟ್ಟಡಗಳ ಬಗ್ಗೆ ಪ್ರತಿಕ್ರಿಯಿಸಿ, ಆರ್.ಐ.ಟಿ.ಎಫ್.13  ಯೋಜನೆ ಯಲ್ಲಿ ಕಾಲೇಜು ಕಟ್ಟಡ ಕಾಮಗಾರಿ ತೆಗೆದುಕೊಂಡಿತ್ತು. ಯೋಜನೆಯಲ್ಲಿ ಕಂಡು ಬಂದ ಲೋಪದಿಂದ ಕಾಮಗಾರಿ ಸ್ಥಗಿತಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಪ್ರತ್ಯೇಕ ಯೋಜನೆಯಲ್ಲಿ ಪ್ರಾರಂಭಿಸಲಾ ಗುವುದು.

ಸಾಗುವಳಿ ಸಮಸ್ಯೆ: ತಾಲ್ಲೂಕಿನ ಆಸ್ಪತ್ರೆ ಕಾವಲ್ ಗ್ರಾಮ ಪಂಚಾಯಿತಿ ಸಹಕಾರಿ ಸೊಸೈಟಿಯ ರೈತರಿಗೆ ಈವರಗೆ ಭೂಮಿ ಸಾಗುವಳಿ ಪತ್ರ ಸಿಗದೆ ಅತಂತ್ರರಾಗಿದ್ದಾರೆ.  ಸರ್ಕಾರಕ್ಕೆ ಬದ್ದತೆ ಇದ್ದರೆ ಕ್ಷಣಾರ್ಧ ದಲ್ಲಿ ಸಮಸ್ಯೆ ಬಗೆಹರಿಸ ಬಹುದು ಎಂದರು.

 ಕೆರೆ ಅಭಿವೃದ್ಧಿಗೆ ಪ್ರಾಧಿಕಾರಕ್ಕೆ ತಾಲ್ಲೂಕಿನ ಬಿಳಿಕೆರೆ ಮತ್ತು ಚಿಕ್ಕಹುಣಸೂರು ಕೆರೆಗಳನ್ನು ಶಿಫಾರಸು ಮಾಡಿ ಕಳುಹಿಸಲಾಗಿತ್ತು. ಅಂದಿನ ಅರಣ್ಯ ಸಚಿವ ಸಿ.ಎಚ್.ವಿಜಯಶಂಕರ್ ಅದನ್ನು ವಜಾಗೊಳಿಸಿ ಹನಗೋಡು ಭಾಗದ  ಬೆಕ್ಕೆಕೊಪ್ಪಲು ಕೆರೆ ಅಭಿವೃದ್ಧಿಗೆ ರೂ 1 ಕೋಟಿ ಅನುದಾನ ನೀಡಿದರು. ಬೆಕ್ಕೆಕೊಪ್ಪಲು ಕೆರೆ ಅಭಿವೃದ್ಧಿ ಕಾಮಗಾರಿ ಕಳಪೆಯಾಗಿದೆ ಎಂದು ವಿಷಾದಿಸಿದರು.

ವಿದ್ಯಾವಂತ ನಿರುದ್ಯೋಗಿ ಹೆಣ್ಣುಮಕ್ಕಳಿಗೆ ಸಿದ್ದ ಉಡುಪು ತಯಾರಿಸುವ ಕಾರ್ಖಾನೆ ತೆರೆದು ಉದ್ಯೋಗ ಮತ್ತು ಅಚ್ಚುಕಟ್ಟು ಪ್ರದೇಶದ ನಾಲೆಗಳನ್ನು ಆಧುನೀ ಕರ ಣಗೊಳಿಸುವ ಮೂಲಕ ಜನ ಮಾನಸದಲ್ಲಿ ಉಳಿ ಯುವ ಆಸೆ  ಇದೆ ಎಂದರು.

ಪುನರ್ವಸತಿ ಕೇಂದ್ರ ದಲ್ಲಿ ವಾಸಿಸುವ ಜನರಿಗೆ ನಿಯಮದಂತೆ ಭೂಮಿ ನೀಡಲು ಇಲಾಖೆಯಲ್ಲಿ ಭೂಮಿ ಇಲ್ಲ.  ಹನಗೋಡು ಅಣೆಕಟ್ಟೆ ಮತ್ತು ಅಚ್ಚುಕಟ್ಟು ಪ್ರದೇಶದ ನಾಲೆ ದುರಸ್ತಿಗೊಳಿಸಲು 10 ಕೋಟಿ ಅನುದಾನ ಬಿಡುಗಡೆಯಾಗಿದೆ.

ಡಿಸೆಂಬರ್‌ನಲ್ಲಿ ಕಾಮ ಗಾರಿಗೆ ಚಾಲನೆ ನೀಡಿ ಶಾಶ್ವತ ಪರಿಹಾರ ನೀಡಲು ಪ್ರಯತ್ನಿಸಲಾಗುವುದು. ವಸತಿ ಯೋಜನೆ ಯಲ್ಲಿ ಪಾರದರ್ಶಕತೆ ಅನುಸರಿಸಬೇಕಿರುವ ಕಾರ್ಯ ಕರ್ತರು ತಪ್ಪು ಹೆಜ್ಜೆ ಹಾಕಿದರೆ ಶಾಸಕರಾಗಲಿ ಅಥವಾ ಜಿ.ಟಿ.ದೇವೇಗೌಡರಾಗಲಿ ಫಲಾನುಭವಿಗಳನ್ನು ತೃಪ್ತಿಪಡಿಸುವು ದಾದರೂ ಹೇಗೆ ಎಂದು ಪ್ರಶ್ನಿಸಿದರು.

25 ಗ್ರಾಮ ಪಂಚಾಯಿತಿಗಳಲ್ಲಿ ಫಲಾನುಭವಿಗಳನ್ನು ಗುರುತಿಸಿ ಮನೆ ವಿತರಿಸುವ ಯೋಜನೆ ಚಾಲನೆಗೆ ಬಂದಿದೆ. ಹನಗೋಡು ಭಾಗದ 6 ಪಂಚಾಯಿತಿಯಲ್ಲಿ ಸಮಸ್ಯೆ ಉದ್ಬವಿ ಸಿದೆ. ಕಾರ್ಯಕರ್ತರು ನಿಜವಾದ ಫಲಾನುಭವಿಗಳನ್ನು ಗುರುತಿಸಿ ಎಂದು ಕಿವಿ ಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.