ADVERTISEMENT

‘ಕಟ್ಟುನಿಟ್ಟಿನ ತನಿಖೆಗೆ ಅಧಿಕಾರಿಗಳಿಗೆ ಸೂಚನೆ’

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2014, 9:17 IST
Last Updated 22 ಮಾರ್ಚ್ 2014, 9:17 IST

ಕೊಳ್ಳೇಗಾಲ: ‘ ಕ್ಷೇತ್ರ ವ್ಯಾಪ್ತಿಯಲ್ಲಿ ತೆರೆಯಲಾಗಿರುವ ಚೆಕ್‌ಪೋಸ್ಟ್‌ಗಳಲ್ಲಿ ಅಕ್ರಮ ಹಣ, ಮದ್ಯ ಹಾಗೂ ಇತರೆ ವಸ್ತುಗಳ ಸಾಗಣೆ ಬಗ್ಗೆ ಅಧಿಕಾರಿಗಳು ಕಟ್ಟುನಿಟ್ಟಿನ ತನಿಖೆ ನಡೆಸಬೇಕು’ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರ ಸಹಾಯಕ ಚುನಾವಣಾಧಿಕಾರಿ ಎಚ್‌.ಎಸ್‌. ಸತೀಶ್‌ಬಾಬು ತಿಳಿಸಿದರು.

ಪಟ್ಟಣದ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ನಡೆದ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳ ಸೆಕ್ಟರ್‌ ಮ್ಯಾಜಿಸ್ಟ್ರೇಟ್‌, ಫೈಯಿಂಗ್‌ಸ್ಕ್ವಾಡ್‌, ನೋಡೆಲ್‌ ಅಧಿಕಾರಿ, ವಿಡಿಯೋ ಸರ್ವೆಲೈನ್‌ ಅಧಿಕಾರಿಗಳ ಮಾರ್ಗ ದರ್ಶನ ಸಭೆಯಲ್ಲಿ  ಮಾತನಾಡಿದರು.

ಟಗರಪುರ, ಆಲ್ದೂರು, ಉಮ್ಮತ್ತೂರು, ವೈ,ಕೆ.ಮೋಳೆ, ಅಗರ–ಮಾಂಬಳ್ಳಿ, ಕೊಳ್ಳೇಗಾಲ ಮೋಳೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿಗದಿಪಡಿಸ ಲಾಗಿದೆ. ಶುಕ್ರವಾರ ದಿಂದಲೇ ಪ್ರತಿನಿತ್ಯ 24 ಗಂಟೆಗಳ ಕಾಲ ಈ ಚೆಕ್‌ಪೋಸ್ಟ್‌ ನಲ್ಲಿ ಅಧಿಕಾರಿಗಳು ಎಚ್ಚರಿದಿಂದರ ಬೇಕು. ಪ್ರತಿ ವಾಹನವನ್ನೂ ಕಡ್ಡಾಯ ವಾಗಿ ತಪಾಸಣೆಗೆ ಒಳಪಡಿಸಿ ಕಟ್ಟು ನಿಟ್ಟಿನ ತನಿಖೆ ನಡೆಸಿ ಚುನಾವಣಾ ಅಕ್ರಮ ಪತ್ತೆಗೆ ಮುಂದಾಗಬೇಕು ಎಂದು ಹೇಳಿದರು.

ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ತನಿಖಾದಿಕಾರಿ ಮುನಿ ರಾಯಪ್ಪ, ಯಳಂದೂರು ತಹಶೀಲ್ದಾರ್‌ ಸಿದ್ದಪ್ಪ, ಬಿಇಒ ಮಂಜುನಾಥ್‌, ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.