ADVERTISEMENT

30 ನಿಮಿಷ ಕಾಯುವ ಅವಧಿ ಉಳಿತಾಯ

ಮೈಸೂರು ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ ಮೇಲ್ದರ್ಜೆ ಕಾಮಗಾರಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 12:40 IST
Last Updated 13 ಜೂನ್ 2019, 12:40 IST
ಮೈಸೂರು ರೈಲು ನಿಲ್ದಾಣ
ಮೈಸೂರು ರೈಲು ನಿಲ್ದಾಣ   

ಮೈಸೂರು: ಮೈಸೂರು ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ಪ್ಲಾಟ್‌ಫಾರ್ಮ್‌ಗಳ ಮೇಲ್ದರ್ಜೆ ಕಾರ್ಯ ನಡೆಯುತ್ತಿದ್ದು, ರೈಲುಗಳ ಕಾಯುವ ಅವಧಿಯು ಇದರಿಂದ 30 ನಿಮಿಷ ಕಡಿಮೆಯಾಗಲಿದೆ.

ನಿಲ್ದಾಣದಲ್ಲಿರುವ ಪ್ಲಾಟ್‌ ಫಾರ್ಮ್‌ ಸಂಖ್ಯೆ 5 ಮತ್ತು 6ರಲ್ಲಿ ಚಾಮರಾಜನಗರದ ಕಡೆಗೆ ರೈಲುಗಳ ಹೋಗಲು ಹಾಲಿ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. 1 ಮತ್ತು 4ನೇ ಪ್ಲಾಟ್‌ಫಾರ್ಮ್‌ನಿಂದ ಮಾತ್ರ ರೈಲುಗಳು ಚಾಮರಾಜನಗರದತ್ತ ಸಂಚರಿಸುತ್ತಿವೆ. ಈ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲುಗಳು ನಿಂತಿದ್ದರೆ ಸಂಚಾರ ಸಾಧ್ಯವಾಗುವುದಿಲ್ಲ.

ಹಾಗಾಗಿ, 5 ಮತ್ತು 6ನೇ ಪ್ಲಾಟ್‌ಫಾರ್ಮ್‌ಗಳನ್ನು ಮೇಲ್ದರ್ಜೆಗೆ ಏರಿಸುತ್ತಿದ್ದು, ಅಲ್ಲಿಂದಲೂ ರೈಲುಗಳು ಚಾಮರಾಜನಗರದತ್ತ ಸಂಚರಿಸುವುದು ಸಾಧ್ಯವಾಗಲಿದೆ.

ADVERTISEMENT

ಬೆಂಗಳೂರಿನ ಕಡೆಗೂ ಮೇಲ್ದರ್ಜೆ: ಅಲ್ಲದೇ, 1 ರಿಂದ 4ನೇ ಪ್ಲಾಟ್‌ಫಾರ್ಮ್‌ನಿಂದ ಬೆಂಗಳೂರು ಮಾರ್ಗಕ್ಕೆ ರೈಲುಗಳು ಸಂಚರಿಸುತ್ತಿವೆ. ಆದರೆ, ಈ ಸಂಚಾರ ಅವಧಿಯಲ್ಲಿ ಬೆಂಗಳೂರು ಕಡೆಯಿಂದ ರೈಲುಗಳು ಬರಬೇಕಾದಲ್ಲಿ ನಿಲುಗಡೆಗೆ ಸಮಸ್ಯೆಯಾಗುತ್ತಿದೆ. ಇದರಿಂದ ಬೆಂಗಳೂರು ಮಾರ್ಗವಾಗಿ ರೈಲುಗಳು ಸಂಚರಿಸುವಾಗ ಕಾಯಬೇಕಾದ ಅನಿವಾರ್ಯತೆ ಇದೆ. ಈ ಸಮಸ್ಯೆಯನ್ನು ಸರಿಪಡಿಸಲು ಸಮಾನಾಂತರ ರೈಲು ಹಳಿಗಳನ್ನು ಜೋಡಿಸಲಾಗುತ್ತಿದೆ. ಇದರಿಂದ ಏಕಕಾಲಕಾಲಕ್ಕೆ ರೈಲುಗಳು ಬರುವುದು, ಹೋಗುವುದು ಸಾಧ್ಯವಾಗ ಲಿದೆ ಎಂದು ರೈಲ್ವೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

ಕಾಮಗಾರಿಗಳು ಜೂನ್‌ 23ಕ್ಕೆ ಮುಗಿಯಲಿವೆ. ಬಳಿಕ ರೈಲುಗಳ ಸಂಚಾರ ಸುಗಮವಾಗಲಿದೆ ಎಂದು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.