ADVERTISEMENT

ಹಾಡಿ ಜನರ ಅಭಿವೃದ್ಧಿಗೆ ಬದ್ಧ: ಶಾಸಕ

​ಪ್ರಜಾವಾಣಿ ವಾರ್ತೆ
Published 3 ಜನವರಿ 2021, 2:53 IST
Last Updated 3 ಜನವರಿ 2021, 2:53 IST
ಎಚ್.ಡಿ.ಕೋಟೆ ತಾಲ್ಲೂಕಿನ ಸೀಗೂರು ಹಾಡಿಯಲ್ಲಿ ಮುಖಂಡ ಆರ್‌.ಧ್ರುವನಾರಾಯಣ ಹಾಗೂ ಶಾಸಕ ಸಿ.ಅನಿಲ್‌ ಕುಮಾರ್‌ ಅವರು ಆದಿವಾಸಿ ಜನರಿಗೆ ಹೊದಿಕೆ ವಿತರಿಸಿದರು
ಎಚ್.ಡಿ.ಕೋಟೆ ತಾಲ್ಲೂಕಿನ ಸೀಗೂರು ಹಾಡಿಯಲ್ಲಿ ಮುಖಂಡ ಆರ್‌.ಧ್ರುವನಾರಾಯಣ ಹಾಗೂ ಶಾಸಕ ಸಿ.ಅನಿಲ್‌ ಕುಮಾರ್‌ ಅವರು ಆದಿವಾಸಿ ಜನರಿಗೆ ಹೊದಿಕೆ ವಿತರಿಸಿದರು   

ಎಚ್.ಡಿ.ಕೋಟೆ: ‘ಜನಪ್ರತಿನಿಧಿಗಳು ಸೇವಾ ಮನೋಭಾವದಿಂದ ಬಡವರಿಗೆ ಸಹಾಯ ಮಾಡಲು ಮುಂದಾದರೆ ಮಾತ್ರ ಸಾರ್ಥಕತೆ ಸಿಗುತ್ತದೆ’ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ ಹೇಳಿದರು.

ತಾಲ್ಲೂಕಿನ ಗಡಿಭಾಗದ ಸೀಗೂರು ಹಾಡಿಯಲ್ಲಿ ಆದಿವಾಸಿ ಜನರಿಗೆ ಹೊದಿಕೆ, ಚಾಪೆ, ಶಾಲು ಮತ್ತು ಊಟದ ವ್ಯವಸ್ಥೆ ಮಾಡಿಸಿ ಅವರ ಜೊತೆ ಹೊಸ ವರ್ಷ ಆಚರಿಸಿ ಮಾತಾಡಿದವರು.

‘ಬುಡಕಟ್ಟು ಸಮಾಜ ಮುಖ್ಯವಾಹಿನಿಗೆ ಬರಬೇಕು, ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ’ ಎಂದು ಸಲಹೆ ನೀಡಿದರು.

ADVERTISEMENT

ಶಾಸಕ ಸಿ.ಅನಿಲ್ ಕುಮಾರ್‌ ಮಾತನಾಡಿ, ‘ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳು ಪ್ರಗತಿಯಿಂದ ಸಾಗುತ್ತಿದ್ದು, ಹಾಡಿ ಜನರ ಏಳಿಗೆಗೆ ಶ್ರಮಿಸುತ್ತಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಖುದ್ದು ಪರಿಶೀಲಿಸಿ ಬಗೆಹರಿಸುವ ಸಲುವಾಗಿ ಹಾಡಿ ಮತ್ತು ಗ್ರಾಮಗಳಲ್ಲಿ ವಾಸ್ತವ್ಯ ಮಾಡಲಾಗುವುದು’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಲ್ಯಾಂಪ್ಸ್ ಅಧ್ಯಕ್ಷ ಕಾವೇರ, ನಿರ್ದೇಶಕ ಪುಟ್ಟಬಸವ, ನಾಗನಹಳ್ಳಿ ಪ್ರದೀಪ, ರಾಜು ವಿಶ್ವಕರ್ಮ, ತಿರುಪತಿ, ಬಸಪ್ಪ, ಮಾದೇಗೌಡ, ರಾಜಪ್ಪ, ಮೌಲ, ನಾಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.