ADVERTISEMENT

ರಾಷ್ಟ್ರೀಯ ಮಟ್ಟದ ಶ್ವಾನ ಸ್ಪರ್ಧೆ 13ಕ್ಕೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 15:36 IST
Last Updated 10 ಅಕ್ಟೋಬರ್ 2019, 15:36 IST

ಮೈಸೂರು: ಕೆನೈನ್ ಕ್ಲಬ್ ಆಫ್‍ ಮೈಸೂರು ವತಿಯಿಂದ ಅ.13ರಂದು ರಾಷ್ಟ್ರೀಯ ಮಟ್ಟದ ಶ್ವಾನ ಸ್ಪರ್ಧೆಯನ್ನು ನಗರದ ಚಾಮುಂಡಿಹಾಲ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ ಎಂದು ಕ್ಲಬ್‌ನ ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದರು.

ಈ ಸ್ಪರ್ಧೆಯ ತೀರ್ಪುಗಾರರಾಗಿ ಬೆಂಗಳೂರಿನ ಟಿ.ಪ್ರೀತಂ, ಲಕ್ನೋದ ಕೆ.ಕೆ.ತ್ರಿವೇದಿ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತುಮಕೂರಿನ ಸಿದ್ದಗಂಗಾ ಮಠದ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಈ ಕಾರ್ಯಕ್ರಮವನ್ನು ಸಮರ್ಪಿಸುತ್ತಿದ್ದು, ಹೆಚ್ಚು ಪ್ರಸಿದ್ಧಿ ಪಡೆದಿರುವಂತಹ ಭಾರತದ ದೊಡ್ಡ ಗಾತ್ರದ ಕೋರಿಯನ್ ದೋಸಾ ಮ್ಯಾಸ್ರಿಫ್, ಲಯನ್ ಹೆಡ್ ಟಿಬೆಟಿಯನ್ ಟೆರಿಯಾ ಮ್ಯಾಸ್ರಿಫ್, 3 ಕೆ.ಜಿ ತೂಕದ ಮಿನಿ ಎಚ್ಚರ್ ಪಿಂಚರ್‌ನಿಂದ ಹಿಡಿದು 100 ಕೆ.ಜಿ. ತೂಕವಿರುವ ಸೆಂಟ್ ಬನ್ರಾಡ್, ಗ್ರೇಟ್ ಡೆನ್, ಡಾಬರ್‌ಮನ್‌, ಜಿ.ಎಸ್.ಡಿ. ಲ್ಯಾಬ್ರಡಾರ್, ಗೋಲ್ಡನ್ ರಿಟ್ರಿವರ್ ಮತ್ತು ಟಾಯಸ್ ಗ್ರೂಪ್‍ನ ಪಗ್, ಲ್ಯಾಸ್‍ಆಪ್ ಸಾ, ಕಾಕರ್ಸ್ ಸ್ಪಾನಿಯಲ್ ಮತ್ತು ದೇಶಿಯ ತಳಿಗಳಾದ ಮುಧೋಳ ಸೇರಿದಂತೆ ದೇಶದ ನಾನಾ ಭಾಗಗಳಿಂದ 35 ತಳಿಯ ಶ್ವಾನಗಳು ಭಾಗವಹಿಸಲಿವೆ ಎಂದು ಮಾಹಿತಿ ನೀಡಿದರು.

ADVERTISEMENT

ಕ್ಲಬ್‍ನ ಖಜಾಂಚಿ ವಿನೋದ್‍ಕುಮಾರ್, ಕಾರ್ಯದರ್ಶಿ ಡಾ.ಸಂಜೀವಮೂರ್ತಿ, ಡಾ.ಅರುಣ್‍ಕುಮಾರ್, ಡಾ.ಡಿ.ಟಿ.ಜಯರಾಮಯ್ಯ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.