ADVERTISEMENT

ನಾನು ಟಾಸ್ಕ್‌ಫೋರ್ಸ್‌ ಸಮಿತಿ ಅಧ್ಯಕ್ಷನಲ್ಲ: ಮಂಜುನಾಥ್

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2024, 22:59 IST
Last Updated 18 ನವೆಂಬರ್ 2024, 22:59 IST
ಡಾ. ಸಿ.ಎನ್. ಮಂಜುನಾಥ್
ಡಾ. ಸಿ.ಎನ್. ಮಂಜುನಾಥ್   

ಮೈಸೂರು: ‘ಕೋವಿಡ್ ಅವಧಿಯಲ್ಲಿ ಸಾಮಗ್ರಿಗಳ ಖರೀದಿಯಲ್ಲಿ ಲೋಪವಾಗಿದೆಯೋ ಇಲ್ಲವೋ ಗೊತ್ತಿಲ್ಲ. ನಾನು ಟಾಸ್ಕ್‌ಪೋರ್ಸ್ ಸಮಿತಿ ಅಧ್ಯಕ್ಷನಲ್ಲ. ಬೇಕಿದ್ದರೆ ತನಿಖೆ ಮಾಡಲಿ’ ಎಂದು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿ.ಎನ್. ಮಂಜುನಾಥ್‌ ಹೇಳಿದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ನಾನು ಸಲಹಾ ಸಮಿತಿ ಸದಸ್ಯನಷ್ಟೇ. ನನ್ನಂತೆ ಬಹಳಷ್ಟು ವೈದ್ಯರು ಸಮಿತಿಯಲ್ಲಿದ್ದರು. ನಮ್ಮದ್ದೇನಿದ್ದರೂ ಪರಿಸ್ಥಿತಿಗೆ ಅನುಗುಣವಾಗಿ ಸಲಹೆ ಕೊಡುವುದಷ್ಟೇ. ಆಡಳಿತಾತ್ಮಕವಾಗಿ ಅಥವಾ ಆರ್ಥಿಕ ನಿರ್ಧಾರಗಳನ್ನು ಕೈಗೊಳ್ಳುವ ಅಧಿಕಾರವಿರಲಿಲ್ಲ. ಅದು ನಮ್ಮ ಕೆಲಸವೂ ಆಗಿರಲಿಲ್ಲ’ ಎಂದರು.

‘ಚನ್ನಪಟ್ಟಣ ಉಪಚುನಾವಣೆ ವಿಚಾರದಲ್ಲಿ, ಯೋಗೇಶ್ವರ್‌ ಅವರಿಗೆ ಸದ್ಯದ ಪರಿಸ್ಥಿತಿ ಅರ್ಥವಾಗಿ ಸೋಲುವ ರೀತಿ ಮಾತನಾಡಿದ್ದಾರೆ. ಕ್ಷೇತ್ರದ ಒಲವು ಯಾರ ಕಡೆಗಿದೆ ಎಂಬುದು ಜೆಡಿಎಸ್ ಮತ್ತು ಬಿಜೆಪಿಗೆ ಗೊತ್ತಾಗಿದೆ. ನಿಖಿಲ್ ಗೆಲ್ಲುತ್ತಾರೆ‌’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.