ADVERTISEMENT

12 ವರ್ಷದ ಬಾಲಕಿ ಗರ್ಭಿಣಿ

ಆರೋಪಿ ವಿರುದ್ಧ ಪೋಕ್ಸೊ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2019, 9:30 IST
Last Updated 17 ಫೆಬ್ರುವರಿ 2019, 9:30 IST

ಹುಣಸೂರು: ತಾಲ್ಲೂಕಿನ ಹಳ್ಳಿಯೊಂದರ 12 ವರ್ಷದ ಬಾಲಕಿ ಗರ್ಭಿಣಿ ಆಗಿದ್ದಾಳೆ. ಈ ವಿಷಯ ಗೊತ್ತಾಗುತ್ತಿದ್ದಂತೆ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಾಲಕಿ 6ನೇ ತರಗತಿ ಓದುತ್ತಿದ್ದಾಳೆ. ಸಮೀಪದ ಹಳ್ಳಿಯೊಂದರ ಯುವಕ ಪ್ರೀತಿಸುವುದಾಗಿ ಹೇಳಿ ದೈಹಿಕ ಸಂಬಂಧ ಬೆಳೆಸಿದ್ದ. ಬಾಲಕಿಗೆ ಶುಕ್ರವಾರ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಪೋಷಕರು ಆಸ್ಪತ್ರೆಗೆ ಕರೆತಂದಾಗ ಗರ್ಭಿಣಿ ಆಗಿರುವುದು
ಗೊತ್ತಾಗಿದೆ.

ಪೋಷಕರು ಕೊಡಗಿನ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಕಾರಣ ಮಗಳ ದೈಹಿಕ ಬೆಳವಣಿಗೆ ಗಮನಿಸಿರಲಿಲ್ಲ ಎನ್ನಲಾಗಿದೆ. ಮೈಸೂರಿನ ಬಾಲಮಂದಿರದಲ್ಲಿ ಬಾಲಕಿಗೆ ಆಶ್ರಯ ನೀಡಲಾಗಿದೆ ಎಂದು ಮಹಿಳಾ ಮತ್ತು ಕಲ್ಯಾಣ ಇಲಾಖೆ ಅಧಿಕಾರಿ ನವೀನ್ ತಿಳಿಸಿದ್ದಾರೆ.

ADVERTISEMENT

ಗ್ರಾಮಾಂತರ ಪೊಲೀಸರು ಆರೋಪಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.