ADVERTISEMENT

‘ಮಹತ್ವಾಕಾಂಕ್ಷೆಯ ಗುರಿ ಹೊಂದಿ’

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2019, 15:12 IST
Last Updated 8 ಸೆಪ್ಟೆಂಬರ್ 2019, 15:12 IST
ಮೈಸೂರಿನ ಸಿದ್ಧಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಕಲಾ(ಕಾವಾ) ಕಾಲೇಜಿನಲ್ಲಿ ಭಾನುವಾರ ನಡೆದ ಗುರುವಂದನಾ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಥಾಪಕ ಡೀನ್ ಪ್ರೊ.ವಿ.ಎಂ.ಶೋಲಾಪುರ್‍ಕರ್, ಸಿ.ಚಂದ್ರಶೇಖರ್, ಎಂ.ಎಲ್.ಶಿವಶಂಕರ, ವಿ.ಎ.ದೇಶಪಾಂಡೆ, ಬಸವರಾಜ್ ಮಸವಳಗಿ, ವಿಜಯರಾವ್, ಡಾ.ಉಪಾಧ್ಯಾಯ ಹಾಗೂ ಡಾ.ಪ್ರೀತಿ ಕಪೂರ್ ಅವರನ್ನು ಅಭಿನಂದಿಸಲಾಯಿತು

ಮೈಸೂರು: ‘ನಮ್ಮ ಭವ್ಯ ಪರಂಪರೆ ತಿಳಿಯುವ ಮನೋಭಾವವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು’ ಎಂದು ಕಲಾವಿದ ಕೆ.ವಿ.ಸುಬ್ರಹ್ಮಣ್ಯ ಕಿವಿಮಾತು ಹೇಳಿದರು.

ಇಲ್ಲಿನ ಸಿದ್ಧಾರ್ಥ ನಗರದಲ್ಲಿರುವ ಚಾಮರಾಜೇಂದ್ರ ಕಲಾ(ಕಾವಾ) ಕಾಲೇಜಿನಲ್ಲಿ ಭಾನುವಾರ ನಡೆದ ಗುರುವಂದನಾ ಕಾರ್ಯಕ್ರಮ ಉದ್ಘಾಟಿಸಿದ ಅವರು ಮಾತನಾಡಿ, ‘ಜೀವನದಲ್ಲಿ ಮಹತ್ವಾಕಾಂಕ್ಷೆಯ ಗುರಿ ಹೊಂದಬೇಕು’ ಎಂದರು.

‘ಸಹೃದಯತೆ ಎಂಬುದೇ ಇಂದು ಮರೆಯಾಗುತ್ತಿದೆ. ವಿದ್ಯಾರ್ಥಿಗಳಲ್ಲಿ ಸಹೃದಯತೆ ಮೂಡಿಸಲು ಇಂತಹ ಕಾರ್ಯಕ್ರಮ ಅವಶ್ಯ. ಆ ಮೂಲಕ ನಿಮ್ಮ ಗುರುಗಳು ಅಥವಾ ಹಿರಿಯರು ಯಾವುದೇ ಕ್ಷೇತ್ರದಲ್ಲಿ ಇದ್ದರೂ ಅವರನ್ನು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ADVERTISEMENT

ಕಾವಾ ಕಾಲೇಜಿನ ಡೀನ್ ಬಿ.ಆರ್.ಪೂರ್ಣಿಮಾ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.