ADVERTISEMENT

ಯಾರ ಮನೆಯಲ್ಲೂ ಎಂಜಲು ತೊಳೆದಿಲ್ಲ: ಸಾ.ರಾ.ಮಹೇಶ್‌ ವಿರುದ್ಧ ಹರಿಹಾಯ್ದ ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2019, 14:07 IST
Last Updated 22 ಸೆಪ್ಟೆಂಬರ್ 2019, 14:07 IST
.
.   

ಮೈಸೂರು: ‘ನಾವು ಜಮೀನ್ದಾರರು. ನಮ್ಮದು ಶ್ರೀಮಂತ ಕುಟುಂಬ. ಯಾರದೋ ಮನೆಯ ಎಂಜಲು ತೊಳೆದು ಬೆಳೆದಿಲ್ಲ’ ಎಂದು ಅನರ್ಹ ಶಾಸಕ ಎಚ್‌.ವಿಶ್ವನಾಥ್‌ ಅವರು ಹೆಸರು ಹೇಳದೆಯೇ ಶಾಸಕ ಸಾ.ರಾ.ಮಹೇಶ್‌ ವಿರುದ್ಧ ಹರಿಹಾಯ್ದರು.

‘ಹಣಕ್ಕೆ ಮಾರಾಟವಾಗಿದ್ದೇನೆ ಎಂದು ಇಲ್ಲಿನ ಶಾಸಕನೊಬ್ಬ ಟೀಕಿಸುತ್ತಾನೆ. ನಾನು ಬ್ಲೂಫಿಲಂ ಮಾಡಲು ಹೋಗಿ ಸಿಕ್ಕಿಬಿದ್ದಿಲ್ಲ. ಯಾರದೋ ಮನೆಯ ಕಾಫಿ ಲೋಟ ತೊಳೆದಿಲ್ಲ. ಯಾರ ಮನೆಯಲ್ಲೂ ಚಡ್ಡಿ ತೊಳೆದಿಲ್ಲ. ಸಂಸಾರ ಉಳಿಸಲು ಮಾರಾಟವಾದೆ ಅನ್ನೋ ಮಾತು ಆಡಬೇಡ. ಏಯ್‌ ಅಯೋಗ್ಯ, ನನ್ನ ಬಗ್ಗೆ ಮಾತನಾಡುವಾಗ ಹುಷಾರ್‌ ಆಗಿರು’ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

‘ನಾನು ಯಾರಿಗೂ ಮಾರಾಟ ಆಗಿಲ್ಲ. ಮಾರಾಟ ಆಗಿದ್ದರೆ, ನನ್ನನ್ನು ಕೊಂಡುಕೊಂಡವ ಒಬ್ಬ ಬೇಕಲ್ಲ. ಆತನನ್ನು ಮೈಸೂರು ಪ್ರೆಸ್‌ ಕ್ಲಬ್‌ಗೆ ಕರೆದುಕೊಂಡು ಬನ್ನಿ. ಎಷ್ಟು ದುಡ್ಡಿಗೆ ಮಾರಾಟ ಆಗಿದ್ದೇನೆ ಎಂಬುದು ಎಲ್ಲರಿಗೂ ತಿಳಿಯಲಿ’ ಎಂದು ಟೀಕಿಸಿದರು.

ADVERTISEMENT

ನ್ಯಾಯ ಸಿಗಲಿದೆ: ‘ಚುನಾವಣಾ ಆಯೋಗವು 15 ಕ್ಷೇತ್ರಗಳಲ್ಲಿ ಉಪಚುನಾವಣೆ ಘೋಷಿಸಿರುವುದನ್ನು ಸ್ವಾಗತಿಸುತ್ತೇನೆ. ನಮ್ಮ ಪ್ರಕರಣ ಸುಪ್ರೀಂ ಕೋರ್ಟ್‌ ಮುಂದಿದೆ. ಸುಪ್ರೀಂ ಕೋರ್ಟ್‌ ಎಲ್ಲ ವಿದ್ಯಮಾನಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ನ್ಯಾಯ ಸಿಗುವ ವಿಶ್ವಾಸವಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.