ADVERTISEMENT

ತೋಟಗಾರಿಕೆಯಲ್ಲಿ ಆಸಕ್ತಿ ಹೊಂದಿದ್ದ ಸಾಹಿತಿ

ಸಾಹಿತ್ಯ ಕೃಷಿ, ಹಣ್ಣಿನ ಮರ ಬೆಳೆಸಿದ್ದ ಮಳಲಿ ವಸಂತಕುಮಾರ್

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2021, 6:15 IST
Last Updated 19 ಮಾರ್ಚ್ 2021, 6:15 IST
ಮೈಸೂರಿನ ಮನೆಯಂಗಳದಲ್ಲಿ ಕಳೆದ ವರ್ಷ ಮಾರ್ಚ್ 2ರಂದು ಆಯೋಜಿಸಿದ್ದ ಕವನ ಸಂಕಲನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಳಲಿ ವಸಂತಕುಮಾರ್ ಭಾಗಿಯಾಗಿದ್ದರು
ಮೈಸೂರಿನ ಮನೆಯಂಗಳದಲ್ಲಿ ಕಳೆದ ವರ್ಷ ಮಾರ್ಚ್ 2ರಂದು ಆಯೋಜಿಸಿದ್ದ ಕವನ ಸಂಕಲನ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ಮಳಲಿ ವಸಂತಕುಮಾರ್ ಭಾಗಿಯಾಗಿದ್ದರು   

ಮೈಸೂರು: ಬೆಂಗಳೂರಿನಲ್ಲಿ ಗುರುವಾರ ನಿಧನರಾದ ಸಾಹಿತಿ ಮಳಲಿ ವಸಂತ ಕುಮಾರ್ ಕೇವಲ ಸಾಹಿತಿ, ಪ್ರಾಧ್ಯಾಪಕರಷ್ಟೇ ಆಗಿರಲಿಲ್ಲ. ಸಾಹಿತ್ಯ ಕೃಷಿ ಜೊತೆಗೆ ತೋಟಗಾರಿಕಾ ಕ್ಷೇತ್ರವನ್ನು ಅಭಿವೃದ್ಧಿಪಡಿಸುವಲ್ಲಿ ಇವರು ನಿರತರಾಗಿದ್ದರು.

ನಗರ ಹೊರವಲಯದ ಕಳಲವಾಡಿ ಸಮೀಪ ಮೂರು ಎಕರೆಯಷ್ಟು ಭೂಮಿಯಲ್ಲಿ ಹಲವು ಬಗೆಯ ಹಣ್ಣಿನ ಮರಗಳನ್ನು ಬೆಳೆಸಿದ್ದರು. ತೆಂಗು, ಹಲಸಿನ ಜತೆಗೆ 8 ತಳಿಗಳ ಮಾವಿನ ಮರ ಬೆಳೆಸಿ ಪೋಷಣೆ ಮಾಡುತ್ತಿದ್ದರು.

ಸಪೋಟ, ಸೀಬೆ, ಬಟರ್‌ಫ್ರೂಟ್, ರಾಮಫಲ, ಸೀತಾಫಲ, ಹನುಮಫಲ, ಕಮರಕ ದ್ರಾಕ್ಷಿಗಳನ್ನು ಇವರು ಬೆಳೆಸಿದ್ದರು. ಸೇಬು ಕೃಷಿಯ ಪ್ರಯತ್ನ ವನ್ನೂ ನಡೆಸಿದ್ದರು ಎಂದು ಇವರ ಪುತ್ರಿ ರೂಪಾ ಮಳಲಿ ನೆನಪಿಸಿಕೊಂಡರು.

ADVERTISEMENT

ಹಣ್ಣಿನ ಮರಗಳ ಮಧ್ಯೆ ಸಾವಯವ ಪದ್ಧತಿಯಲ್ಲಿ ತರಕಾರಿಗಳನ್ನು ಬೆಳೆಯುತ್ತಿ ದ್ದರು. ತರಕಾರಿಯ ಪ್ರಮಾಣ ಹೆಚ್ಚಾದರೆ ಅದನ್ನು ಸಮೀಪದ ಸಾವಯವ ಅಂಗಡಿಗೆ ಮಾರಾಟ ಮಾಡುತ್ತಿದ್ದರು.

ಕೋಲಾಟದಲ್ಲಿ ಅತೀವ ಆಸಕ್ತಿ ಹೊಂದಿದ್ದ ಇವರು, ನಾಟಕದಲ್ಲೂ ಅಭಿನಯಿಸಿದ್ದರು. ಕರ್ನಾಟಕ ವಿಚಾರ ವೇದಿಕೆ ಸೇರಿದಂತೆ ಹಲವು ಬಗೆಯ ಸಂಘಟನೆಗಳನ್ನು ಸಂಘಟಿಸಿದ್ದ ಇವರು, ಹಾಸನದ ಸ್ನಾತಕೋತ್ತರ ಪದವಿ ವಿಭಾಗದ ಬೆಳವಣಿಗೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.