ADVERTISEMENT

ಎರಡು ಹೆಸರು ಕಳಿಸಿದ್ದೇ ತಪ್ಪು, ಮುನಿರತ್ನಗೇ ಟಿಕೆಟ್‌ ಸಿಗಬೇಕು: ಎಚ್‌.ವಿಶ್ವನಾಥ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 11:13 IST
Last Updated 5 ಅಕ್ಟೋಬರ್ 2020, 11:13 IST
ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್
ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್   

ಮೈಸೂರು: ‘ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಟಿಕೆಟ್‌ ವಿಚಾರದಲ್ಲಿ ವರಿಷ್ಠರಿಗೆ ಎರಡು ಹೆಸರು ಕಳಿಸಿದ್ದು ಏಕೆ? ಇದು ಮೊದಲ ತಪ್ಪು. ಮುನಿರತ್ನ ಅವರಿಗೇ ಟಿಕೆಟ್‌ ಸಿಗಬೇಕು. ಯಾವುದೇ ಕಾರಣಕ್ಕೂ ಕೈ ತಪ್ಪಬಾರದು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಸೋಮವಾರ ಇಲ್ಲಿ ಹೇಳಿದರು.

‘ಬಿಜೆಪಿ ಸರ್ಕಾರ ರಚನೆಗಾಗಿ ಮುನಿರತ್ನ ಸಹಾಯ ಮಾಡಲಿಲ್ಲವೇ? ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿಲ್ಲವೇ? ಪಕ್ಷದ ವರಿಷ್ಠರಿಗೆ ಎಷ್ಟಾದರೂ ಹೆಸರು ಕಳಿಸಿಕೊಳ್ಳಲಿ. ಏನಾದರೂ ಚರ್ಚೆ ನಡೆಯಲಿ. ಮುನಿರತ್ನ ಹೆಸರು ಅಂತಿಮವಾಗಬೇಕು’ ಎಂದು ಎಚ್ಚರಿಕೆ ನೀಡಿದರು.

ಡಿ.ಕೆ. ಶಿವಕುಮಾರ್‌ ಅವರ ನಿವಾಸದ ಮೇಲೆ ಸಿಬಿಐ ದಾಳಿ ಕುರಿತು ಪ್ರತಿಕ್ರಿಯಿಸಿ, ‘ಕಾನೂನು ಪ್ರಕಾರ ಇಂಥ ಪ್ರಕ್ರಿಯೆ ದೇಶದಲ್ಲಿ ನಡೆಯುತ್ತಿರುತ್ತವೆ. ಈ ಸಮಸ್ಯೆ ಮೀರಿ ನಿಲ್ಲುವ ಶಕ್ತಿ ಶಿವಕುಮಾರ್ ಅವರಿಗೆ ಇದೆ. ನಾವೆಲ್ಲಾ ಜೊತೆಯಾಗಿ ಕೆಲಸ ಮಾಡಿದವರು. ರಾಜಕೀಯ ನಿತ್ಯ ನಡೆಯುತ್ತಲೇ ಇರುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.