ADVERTISEMENT

ದಸರಾ: ರೌಡಿ ಪರೇಡ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 6:39 IST
Last Updated 20 ಸೆಪ್ಟೆಂಬರ್ 2019, 6:39 IST
ಮೈಸೂರಿನಲ್ಲಿ ಡಿಸಿಪಿ ಎಂ.ಮುತ್ತುರಾಜ್ ಗುರುವಾರ ರೌಡಿ ಶೀಟರ್‌ಗಳ ಪರೇಡ್‌ ನಡೆಸಿದರು
ಮೈಸೂರಿನಲ್ಲಿ ಡಿಸಿಪಿ ಎಂ.ಮುತ್ತುರಾಜ್ ಗುರುವಾರ ರೌಡಿ ಶೀಟರ್‌ಗಳ ಪರೇಡ್‌ ನಡೆಸಿದರು   

ಮೈಸೂರು: ‘ದಸರಾ ‌ಸಮಯದಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಡಿ’ ಎಂದು ಡಿಸಿಪಿ ಎಂ.ಮುತ್ತುರಾಜ್ ರೌಡಿ ಶೀಟರ್‌ಗಳಿಗೆ ಖಡಕ್‌ ಎಚ್ಚರಿಕೆ ನೀಡಿದರು.

ನಗರದ ಕೇಂದ್ರ ಕಾರಾಗೃಹದ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಕವಾಯತು ಮೈದಾನದಲ್ಲಿ ಗುರುವಾರ ನಗರದ ರೌಡಿಶೀಟರ್‌ಗಳ ಪರೇಡ್‌ ನಡೆಸಿದ ಡಿಸಿಪಿ, ಹಲವು ಸೂಚನೆ ನೀಡಿದರು.

‘ದಸರಾ ಮಹೋತ್ಸವಕ್ಕೆ ದೇಶ–ವಿದೇಶಗಳಿಂದಲೂ ಸಹ ಪ್ರವಾಸಿಗರು ಬರುತ್ತಾರೆ. ಈ ಸಮಯದಲ್ಲಿ ಪ್ರವಾಸಿಗರಿಗೆ ನಿಮ್ಮಿಂದ ಯಾವುದೇ ರೀತಿಯ ತೊಂದರೆ ಉಂಟಾಗಬಾರದು’ ಎಂದು ಕಠಿಣ ಎಚ್ಚರಿಕೆ ರವಾನಿಸಿದರು.

ADVERTISEMENT

ಸಿ.ಸಿ.ಬಿ. ಘಟಕದ ಎ.ಸಿ.ಪಿ. ವಿ.ಮರಿಯಪ್ಪ, ರೌಡಿ ಪ್ರತಿಬಂಧಕ ದಳದ ಪೊಲೀಸ್ ಇನ್ಸ್‌ಪೆಕ್ಟರ್ ಮಲ್ಲೇಶ್.ಎ, ಸಿ.ಸಿ.ಬಿ.ಯ ಪೊಲೀಸ್ ಇನ್ಸ್‌ಪೆಕ್ಟರ್ ಕಿರಣ್ ಕುಮಾರ್ ರೌಡಿ ಶೀಟರ್‌ಗಳ ಚಟುವಟಿಕೆಗಳ ಬಗ್ಗೆ ವಿಚಾರಣೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.