ADVERTISEMENT

ಚೆಸ್‌: ಪ್ರಸಿದ್ಧಿ ಭಟ್‌ಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 20 ಮೇ 2019, 10:12 IST
Last Updated 20 ಮೇ 2019, 10:12 IST
ಬಾಲಕ ಮತ್ತು ಬಾಲಕಿಯರ ವಿವಿಧ ವಯೋವರ್ಗಗಳಲ್ಲಿ ಗೆದ್ದವರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು
ಬಾಲಕ ಮತ್ತು ಬಾಲಕಿಯರ ವಿವಿಧ ವಯೋವರ್ಗಗಳಲ್ಲಿ ಗೆದ್ದವರು ಪ್ರಶಸ್ತಿಯೊಂದಿಗೆ ಸಂಭ್ರಮಿಸಿದರು   

ಮೈಸೂರು: ಪ್ರಸಿದ್ಧಿ ಭಟ್‌ ಅವರು ಮೈಸೂರು ಜಿಲ್ಲಾ ಚೆಸ್‌ ಸಂಸ್ಥೆ ಆಶ್ರಯದಲ್ಲಿ ನಡೆದ ಮುಕ್ತ ಚೆಸ್‌ ಟೂರ್ನಿಯ 19 ವರ್ಷ ವಯಸ್ಸಿನೊಳಗಿನವರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ಮೈಸೂರು ವಿ.ವಿ. ಜಿಮ್ನೇಷಿಯಂ ಹಾಲ್‌ನಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಪ್ರಸಿದ್ಧಿ ಅವರು ಏಳು ಸುತ್ತುಗಳಿಂದ ಒಟ್ಟು ಏಳು ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನ ತಮ್ಮದಾಗಿಸಿಕೊಂಡರು.

ಆರು ಪಾಯಿಂಟ್‌ ಕಲೆಹಾಕಿದ ಹೇಮಾದ್ರಿ ಸತೀಶ್ ‘ರನ್ನರ್‌ ಅಪ್‌’ ಸ್ಥಾನ ಪಡೆದರೆ, 5.5 ಪಾಯಿಂಟ್‌ ಸಂಗ್ರಹಿಸಿದ ವಿ.ಅವಿನಾಶ್‌ ಮೂರನೇ ಸ್ಥಾನ ಗಿಟ್ಟಿಸಿಕೊಂಡರು.

ADVERTISEMENT

ಪ್ರೀತಂ ಎಸ್‌.ರಾವ್‌ ಮತ್ತು ವಿಂಧ್ಯಾ ಶ್ರೀಧರ್‌ ಅವರು ಕ್ರಮವಾಗಿ 14 ವರ್ಷ ವಯಸ್ಸಿನೊಳಗಿನವರ ಬಾಲಕರ ಮತ್ತು ಬಾಲಕಿಯರ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.

ಕೃಷ್ಣಮೂರ್ತಿ ಅವರು ವಿಜೇತರಿಗೆ ಪ್ರಶಸ್ತಿ ವಿತರಿಸಿದರು. ಎಂಡಿಸಿಎ ಅಧ್ಯಕ್ಷ ಸುದರ್ಶನ್, ಕಾರ್ಯದರ್ಶಿ ಕೆ.ಆರ್‌.ಶಿವರಾಮೇಗೌಡ ಅವರು ಪಾಲ್ಗೊಂಡಿದ್ದರು.

ಫಲಿತಾಂಶ:19 ವರ್ಷ ವಯಸ್ಸಿನೊಳಗಿನ ಮುಕ್ತ ವಿಭಾಗ: 1–ಪ್ರಸಿದ್ಧಿ ಭಟ್ (7 ಪಾಯಿಂಟ್), 2–ಹೇಮಾದ್ರಿ ಸತೀಶ್ (6), 3–ವಿ.ಅವಿನಾಶ್ (5.5), 4–ಎಂ.ಜಿ.ಪ್ರಮೀತ್ (5.5), 5–ಜೆ.ಸಂದೀಪ್ (5.5)

ಬಾಲಕರ ವಿಭಾಗ: 14 ವರ್ಷ ವಯಸ್ಸಿನೊಳಗಿನವರು: 1–ಪ್ರೀತಂ ಎಸ್‌.ರಾವ್ (5 ಪಾಯಿಂಟ್), 2–ಎನ್‌.ಆದಿತ್ಯ (5), 3–ಎಂ.ಎಚ್‌.ಆಕಾಶ್ (5)

10 ವರ್ಷ: 1–ನಿವಾನ್‌ ರಾಘವೇಂದ್ರ (5), 2–ಅರುಷ್‌ ಎಸ್‌.ಗೌಡ (4.5), 3–ಆರ್‌.ಹೃತ್ವಿಕ್ (4.5)

7 ವರ್ಷ: 1–ಪಿ.ಲೇಖನ್ (4), 2–ಆರ್.ಶ್ರೇಯಸ್ (3), 3–ಹರಿ ಕಿಶನ್ (2)

ಬಾಲಕಿಯರ ವಿಭಾಗ: 14 ವರ್ಷ: 1–ವಿಂಧ್ಯಾ ಶ್ರೀಧರ್ (5 ಪಾಯಿಂಟ್ ), 2–ಎಂ.ಎನ್‌.ಈಶಾನ್ವಿ (5), 3–ಧಾತ್ರಿ ಉಮೇಶ್ (5)

10 ವರ್ಷ: 1–ಯಶಿಕಾ ಆರ್‌.ಜೋಷಿ (5), 2–ಎಸ್‌.ಜಿ.ವಿಸ್ಮಿತಾ (4), 3–ಎಂ.ಎನ್‌.ಜಾಹ್ನವಿ (3)

7 ವರ್ಷ: 1–ದಿವ್ಯಾ ಉಮೇಶ್ (4), 2–ಎಂ.ಧಾತ್ರಿ (2.5). 3–ತನೀಶಾ (2)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.