ADVERTISEMENT

ಜಿಲ್ಲೆಯಲ್ಲಿ ಅಬ್ಬರಿಸಿದ ಆಶ್ಲೇಷ ಮಳೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 16:12 IST
Last Updated 7 ಆಗಸ್ಟ್ 2020, 16:12 IST
ಚಾಮುಂಡಿಬೆಟ್ಟವು ಶುಕ್ರವಾರ ಹಿಮವನ್ನೇ ಹೊದ್ದುಕೊಂಡಂತೆ ಭಾಸವಾಯಿತು. ಮುಂಗಾರು ಮೋಡಗಳು ಬೆಟ್ಟಕ್ಕೆ ಚುಂಬಿಸಿದ ಕ್ಷಣವು ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು   ಚಿತ್ರ: ಬಿ.ಆರ್.ಸವಿತಾ
ಚಾಮುಂಡಿಬೆಟ್ಟವು ಶುಕ್ರವಾರ ಹಿಮವನ್ನೇ ಹೊದ್ದುಕೊಂಡಂತೆ ಭಾಸವಾಯಿತು. ಮುಂಗಾರು ಮೋಡಗಳು ಬೆಟ್ಟಕ್ಕೆ ಚುಂಬಿಸಿದ ಕ್ಷಣವು ಕ್ಯಾಮೆರಾ ಕಣ್ಣಿಗೆ ಸೆರೆಯಾಯಿತು   ಚಿತ್ರ: ಬಿ.ಆರ್.ಸವಿತಾ   

ಮೈಸೂರು: ಜಿಲ್ಲೆಯಲ್ಲಿ ಶುಕ್ರವಾರ ದಿನವಿಡೀ ಆಶ್ಲೇಷ ಮಳೆ ಅಬ್ಬರಿಸಿದೆ. ಹುಣಸೂರು ತಾಲ್ಲೂಕಿನ ದೊಡ್ಡಹೆಜ್ಜೂರು ಗ್ರಾಮ ಹಾಗೂ ಪಿರಿಯಾಪಟ್ಟಣದ ಮುತ್ತೂರು ಗ್ರಾ.ಪಂ ವ್ಯಾಪ್ತಿಯಲ್ಲಿ 8 ಸೆಂ.ಮೀ.ನಷ್ಟು ಮಳೆ ಸುರಿದಿದೆ.

ಎಚ್.ಡಿ.ಕೋಟೆ ಪಟ್ಟಣದಲ್ಲಿ 6, ಪಿರಿಯಾಪಟ್ಟಣದಲ್ಲಿ 4, ನಂಜನಗೂಡಿನ ಹುಲ್ಲಹಳ್ಳಿಯಲ್ಲಿ 4, ಮೈಸೂರು ನಗರದಲ್ಲಿ 1 ಸೆಂ.ಮೀ.ನಷ್ಟು ಮಳೆಯಾಗಿದೆ.

ನಗರದಲ್ಲಿ ನಸುಕಿನಿಂದಲೇ ಮಳೆ ಆರಂಭವಾಗಿತ್ತು. ವಾಯುವಿಹಾರಿಗಳು ಮನೆಯಲ್ಲೇ ಉಳಿಯುವಂತಾಯಿತು. ಬೇಗನೆ ಎದ್ದು ಹೊರಟಿದ್ದವರು ಅರ್ಧ ದಾರಿಯಲ್ಲೇ ಮಳೆಯಲ್ಲಿ ಸಿಲುಕಬೇಕಾಯಿತು. ಜಿಟಿಜಿಟಿ ಮಳೆ ದಿನವಿಡೀ ಮುಂದುವರಿಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.