ADVERTISEMENT

ಪೊಲೀಸ್‌ ಶ್ವಾನ ಲಕ್ಕಿ ಸಾವು

​ಪ್ರಜಾವಾಣಿ ವಾರ್ತೆ
Published 22 ಅಕ್ಟೋಬರ್ 2020, 4:32 IST
Last Updated 22 ಅಕ್ಟೋಬರ್ 2020, 4:32 IST
ಲಕ್ಕಿಗೆ ಗೌರವ ನಮನ ಸಲ್ಲಿಸಿದ ಪೊಲೀಸರು
ಲಕ್ಕಿಗೆ ಗೌರವ ನಮನ ಸಲ್ಲಿಸಿದ ಪೊಲೀಸರು   

ಮೈಸೂರು: ಜಿಲ್ಲಾ ಪೊಲೀಸ್‌ ಶ್ವಾನದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಆರೂವರೆ ವರ್ಷದ ಹೆಣ್ಣು ಶ್ವಾನ ಲಕ್ಕಿ ಮೃತಪಟ್ಟಿದೆ.

ಮೈಸೂರು ಸೇರಿದಂತೆ ವಿವಿಧೆಡೆ 200ಕ್ಕೂ ಹೆಚ್ಚು ಸ್ಫೋಟಕಗಳನ್ನು ಪತ್ತೆ ಹಚ್ಚುವಲ್ಲಿ ಲಕ್ಕಿ ಪ್ರಮುಖ ಪಾತ್ರ ವಹಿಸಿತ್ತು ಎನ್ನಲಾಗಿದೆ.

2018ರಲ್ಲಿ ನಡೆದ ದಕ್ಷಿಣ ವಲಯ ಪೊಲೀಸ್‌ ಕ್ರೀಡಾಕೂಟದಲ್ಲಿ ಲಕ್ಕಿ ತನ್ನ ಶೌರ್ಯ, ಜಾಣ್ಮೆ ಪ್ರದರ್ಶಿಸಿ ಕಂಚಿನ ಪದಕ ಗೆದ್ದಿತ್ತು.

ADVERTISEMENT

ಮೃತ ಲಕ್ಕಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಡಿಎಆರ್‌ನ ಡಿವೈಎಸ್‌ಪಿ ಸತೀಶ್‌, ಶ್ವಾನ ದಳದ ಸಿಬ್ಬಂದಿ ಅಂತಿಮ ಗೌರವ ನಮನ ಸಲ್ಲಿಸಿದರು.

ಲಕ್ಕಿಯ ಅಂತ್ಯಸಂಸ್ಕಾರವನ್ನು ಶ್ವಾನದಳದ ಆವರಣದಲ್ಲೇ ವಿಧಿ ವಿಧಾನಗಳಂತೆ ನೆರವೇರಿಸಲಾಯಿತು ಎಂದು ಎಆರ್‌ಎಸ್‌ಐ ಬಿ.ನಾಗರಾಜು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.