ADVERTISEMENT

ಅನುದಾನ ದುರುಪಯೋಗ: ಸದಸ್ಯರ ಆರೋಪ

​ಪ್ರಜಾವಾಣಿ ವಾರ್ತೆ
Published 20 ಜನವರಿ 2011, 8:45 IST
Last Updated 20 ಜನವರಿ 2011, 8:45 IST

ಕನಕಗಿರಿ: ಗ್ರಾಮದ ವಾರ್ಡ್‌ಗಳ ಅಭಿ ವೃದ್ದಿಗೆ 13ನೇ ಹಣಕಾಸಿನ ಯೋಜನೆ ಯಲ್ಲಿ ಮಂಜೂರಾದ 3.54 ಲಕ್ಷ ರೂಪಾಯಿಯನ್ನು ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ, ಕಾರ್ಯದರ್ಶಿ ತಿಮ್ಮಾರೆಡ್ಡಿ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಪಕ್ಷ ಭೇದ ಇಲ್ಲದೆ ಗ್ರಾಮ ಪಂಚಾಯಿತಿ ಸದಸ್ಯರು ದೂರಿದರು.

ಇಲ್ಲಿನ ಗ್ರಾಮ ಪಂಚಾಯಿತಿ ಸಭಾ ಗಂಣದಲ್ಲಿ ಮಂಗಳವಾರ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಸಭೆಯಲ್ಲಿದ್ದ ಸದಸ್ಯರು ಸರ್ವಾಧಿಕಾರಿಧೋರಣೆ ಹೊಂದಿರುವ ಅಧ್ಯಕ್ಷೆ ಮತ್ತು ಕಾರ್ಯ ದರ್ಶಿಯನ್ನು ತರಾಟೆಗೆ ತೆಗೆದು ಕೊಂಡರು.

ಕಳೆದ ನಾಲ್ಕಾರು ತಿಂಗಳ ಹಿಂದೆ ನಡೆದ ಸಭೆಯಲ್ಲಿ ಚರ್ಚಿಸಿದ ಪ್ರಕಾರ ಅನುದಾನವನ್ನು ಪ್ರತಿ ವಾರ್ಡ್‌ಗಳ ಅಭಿವೃದ್ಧಿಗೆ ಹಂಚಿಕೆ ಮಾಡಬೇಕಾ ಗಿತ್ತು, ಅದನ್ನು ಬಿಟ್ಟು ಸದಸ್ಯರ ಗಮನಕ್ಕೆ ಇಲ್ಲದೆ ಬೋರವೆಲ್, ಕಂಪ್ಯೂಟರ್‌ಗಳ ಮುದ್ರಣ ಯಂತ್ರ ಖರೀದಿಗೆ ಉಪಯೋಗಿಸಲಾಗಿದೆ, ಇದರಲ್ಲಿ ಸಾಕಷ್ಟು ಅವ್ಯವಹಾರ ಆಗಿದೆ ಎಂದು ಗ್ರಾಪಂ ಸದಸ್ಯರಾದ ಕೆ. ಸುಭಾಸ, ರಾಜಾಸಾಬ ನಂದಾಪುರ, ಸಣ್ಣ ಕನಕಪ್ಪ, ಶಿವಕುಮಾರ ಕೋರಿ, ಶರಣಗೌಡ ಪಾಟೀಲ, ನಾಗೇಶ ಬಡಿಗೇರ, ಹೊನ್ನೂರಸಾಬ ಬೀಡಿ, ತಿಪ್ಪಣ್ಣ ಮಡಿವಾಲರ ಇತರರು ದೂರಿದರು.

ಪರಿಶಿಷ್ಟ ಜಾತಿ, ಪಂಗಡದವರ ಕಲ್ಯಾಣಕ್ಕೆ ಈ ಅನುದಾನವನ್ನು ಮೀಸ ಲಿಡಬೇಕೆಂಬ ನಿಯಮ ಇದ್ದರೂ ಕಾರ್ಯದರ್ಶಿಗಳು ಅದನ್ನು ಗಾಳಿಗೆ ತೂರಿ ಜನಾಂಗಕ್ಕೆ ಅನ್ಯಾಯ ಎಸಗಿದ್ದಾರೆ, ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ನಿಂಗಪ್ಪ ಆಗ್ರಹಿಸಿದರು. ಕಾರ್ಯದರ್ಶಿಗಳು ಸರಿಯಾಗಿ ಕೆಲಸ ಮಾಡಲ್ಲ, ಯೋಜನೆಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಲ್ಲ, ಕೇಳಿ ದರೂ ಮೌನ ವಹಿಸುತ್ತಾರೆ, ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಪರಸಪ್ಪ ಚಿಟಗಿ ದೂರಿದರು.ಅನುದಾನ ದುರುಪಯೋಗವಾಗಿಲ್ಲ, ಅಧ್ಯಕ್ಷರು, ಉಪಾಧ್ಯಕ್ಷರಿಗೆ ಮಾತ್ರ ತಿಳಿಸಿ ಹಣ ಬಳಸಲಾಗಿದೆ ಎಂದು ತಿಳಿಸಿದರು.

ಸಂಪೂರ್ಣ ಸ್ವಚ್ಛತಾ ಆಂದೋಲ ನದ ಯೋಜನೆಯ ಫಲಾನುಭವಿಳಿಗೆ ಅನುದಾನ ನೀಡುವಂತೆ ಸುಭಾಸ ಒತ್ತಾಯಿಸಿದರು.ಜಲ ನಿರ್ಮಲ ಯೋಜನೆಯಲ್ಲಿ ಗ್ರಾಮದ ಚರಂಡಿ, ರಸ್ತೆ ಅಭಿವೃದ್ಧಿಗೆ 1.74 ಕೋಟಿ ರೂಪಾಯಿ ಮಂಜೂ ರಾಗಿದೆ, ವಂತಿಗೆ ಹಣ ಕಟ್ಟಿದರೆ ಯೋಜನೆ ಆರಂಭಿಸಲು ಸಾಧ್ಯವಿದೆ, ಕುಡಿಯುವ ನೀರಿನ ಯೋಜನೆಗೆ ಇನ್ನೂ 10 ಲಕ್ಷ ವಂತಿಗೆ ಹಣ ಕಟ್ಟಬೇಕಾಗಿದೆ ಕಾರ್ಯದರ್ಶಿಗಳು ಸಭೆಗೆ ತಿಳಿಸಿದರು.

ಜ. 29ರೊಳಗೆ 3.54 ಲಕ್ಷ ರೂಪಾಯಿ ಜಮೆ ಮಾಡಿ ವಾರ್ಡ್‌ಗಳ ಅಭಿವೃದ್ಧಿಗೆ ಬಳಸದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಗ್ರಾಪಂ ಸದಸ್ಯರು ಎಚ್ಚರಿಕೆ ನೀಡಿದರು.  ಗ್ರಾಪಂ ಅಧ್ಯಕ್ಷೆ ಮಲ್ಲಮ್ಮ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.