ADVERTISEMENT

`ಎಚ್ಚರಿಕೆ ಕ್ರಮ ಪಾಲಿಸಿ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:44 IST
Last Updated 4 ಏಪ್ರಿಲ್ 2013, 6:44 IST

ರಾಯಚೂರು: ವಿಧಾನ ಸಭಾ ಚುನಾವಣೆ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ಕಾರ್ಯಕರ್ತರ ಸಭೆ ಬುಧವಾರ ಜಿಲ್ಲಾಡಳಿತ ಕಚೇರಿ ಸಭಾಭವನದಲ್ಲಿ ನಡೆಯಿತು.

ನೀತಿ ಸಂಹಿತೆ ಇತರ ವಿಷಯಗಳ ಕುರಿತು ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಚುನಾವಣೆ, ನಾಮಪತ್ರ ಭರ್ತಿ, ನೀತಿ ಸಂಹಿತೆ ಪಾಲನೆ, ಮೆರವಣಿಗೆ, ಸಭೆ ಸಮಾರಂಭಗಳನ್ನು ನಡೆಸುವುದು, ಚುನಾವಣಾ ಪ್ರಚಾರ ಇತ್ಯಾದಿಗಳ ಕುರಿತು ವಿವಿಧ ಪಕ್ಷಗಳ ಕಾರ್ಯಕರ್ತರಿಗೆ ಸಭೆಯಲ್ಲಿ ಡಿಸಿ ವಿವರಿಸಿದರು.

ನಾಮ ಪತ್ರಗಳನ್ನು ತುಂಬುವ ಕೊನೆಯ ದಿನದಂದು ಅಥವಾ ಕೊನೆಯ ವೇಳೆಯಲ್ಲಿ ಅಭ್ಯರ್ಥಿಗಳು ಯಾವುದೇ ಪ್ರಮಾಣ ಪತ್ರಗಳನ್ನು ತಂದಿಲ್ಲವೆಂದು ಕೊಠಡಿಯಿಂದ ನಿರ್ಗಮಿಸುವಂತಿಲ್ಲ. ಈ ಕುರಿತು ಮೊದಲೇ ತಯಾರಿ ನಡೆಸಿಕೊಂಡು ಬರಬೇಕು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಂ ತಿಮ್ಮಪ್ಪ ತಿಳಿಸಿದರು.

ಅಭ್ಯರ್ಥಿಗಳು ಖರ್ಚು ವೆಚ್ಚಗಳ ಬಗ್ಗೆ ತೀವ್ರ ನಿಗಾ ವಹಿಸುತ್ತಿರುವ ಚುನಾವಣಾ ಅಯೋಗ ಸರಿಯಾದ ಲೆಕ್ಕ ಪತ್ರಗಳನ್ನು ಇಟ್ಟುಕೊಳ್ಳುವಂತೆ ಮತ್ತು ಆಯೋಗ ನಿಗದಿಪಡಿಸಿದ ಮೊತ್ತದಲ್ಲಿ ವೆಚ್ಚಗಳನು ಸರಿದೂಗಿಸಲು ಜಿಲ್ಲಾಧಿಕಾರಿ ತಿಳಿಸಿದರು. ಚುನಾವಣೆ ವೆಚ್ಚಗಳ ಕುರಿತಾದ ಪರಿಶೀಲನೆಗಾಗಿ ಪರಿವೀಕ್ಷಕರು ಆಗಮಿಸುತ್ತಿದ್ದು, ಕಟ್ಟು ನಿಟ್ಟಿನ ಪಾಲನೆಗೆ ಸಹಕರಿಸುವಂತೆ ಅವರು ವಿವಿಧ ಪಕ್ಷಗಳ ಪ್ರತಿನಿಧಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠ ಎಸ್.ಬಿ ಬಿಸ್ನಳ್ಳಿ,  ಸಹಾಯಕ ಆಯುಕ್ತೆ ಮಂಜುಶ್ರೀ, ಹೆಚ್ಚುವರಿ ಜಿಲ್ಲಾಧಿಕಾರಿ ಎಂ ತಿಮ್ಮಪ್ಪ ಹಾಗೂ ವಿವಿಧ ರಾಜಕಿಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.