ರಾಯಚೂರು: ರಾಯಚೂರು ಜಿಲ್ಲಾ ಪಂಚಾಯಿತಿ ಅಧಿಕಾರ ಗದ್ದುಗೆ ಶನಿವಾರ ಕಾಂಗ್ರೆಸ್-ಜೆಡಿಎಸ್ ಪಕ್ಷದ ಮೈತ್ರಿ ಪಾಲಾಯಿತು. ಅಧ್ಯಕ್ಷ ಹುದ್ದೆ ಹಿಂದುಳಿದ ಅ-ವರ್ಗ, ಉಪಾಧ್ಯಕ್ಷ ಹುದ್ದೆ ಸಾಮಾನ್ಯ ಮಹಿಳೆ ಮೀಸಲಾತಿ ಹೊಂದಿದ್ದ ಚುನಾವಣೆ ತೀವ್ರ ಕುತೂಹಲ ಕೆರಳಿಸಿತ್ತು.
ಅಧ್ಯಕ್ಷ-ಉಪಾಧ್ಯಕ್ಷ ಚುನಾವ ಣೆಯಲ್ಲಿ ತಲಾ 24 ಮತ ಗಳಿಸುವ ಮೂಲಕ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ತನ್ವೀರಾ ಬಷಿರುದ್ಧೀನ್ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‌ನ ಹರ್ಷಾ ಜಗನ್ನಾಥರಾಯ ಆಯ್ಕೆಗೊಂಡರು.
ಮಧ್ಯಾಹ್ನ ಜಿಲ್ಲಾ ಪಂಚಾಯಿತಿ ಸಭಾಭವನದಲ್ಲಿ ಪ್ರಾದೇಶಿಕ ಆಯು ಕ್ತರು ಹಾಗೂ ಚುನಾವ ಣಾಧಿಕಾರಿ ರಜನೀಶ್ ಗೋಯಲ್ ನಡೆಸಿದ ಚುನಾವಣೆ ಪ್ರಕ್ರಿಯೆಯಲ್ಲಿ ಇವರು ಆಯ್ಕೆಗೊಂಡರು.
ಅಧ್ಯಕ್ಷ ಹುದ್ದೆಗೆ ಯರಗೇರಾ ಕ್ಷೇತ್ರದ ತನ್ವೀರಾ ಬಷಿರುದ್ದೀನ್, ಸಿಂಧನೂರು ತಾಲ್ಲೂಕು ತುರವಿಹಾಳ ಸದಸ್ಯೆ ಬಸಮ್ಮ ಕುಂಟೋಜಿ ನಾಮ ಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಹುದ್ದೆಗೆ ಜಾಲಹಳ್ಳಿ ಕ್ಷೇತ್ರದ ಸದಸ್ಯೆ ಹರ್ಷಾ ಜಗನ್ನಾಥರಾಯ ನಾಮಪತ್ರ ಸಲ್ಲಿಸಿದ್ದರು.
ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದ ತನ್ವೀರಾ ಬಷಿರುದ್ಧೀನ್ ಅವರು ಹಿಂದುಳಿದ ವರ್ಗ-ಅ ವರ್ಗಕ್ಕೆ ಮೀಸಲಾದ ಅಧ್ಯಕ್ಷೆ ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅದನ್ನು ತಿರಸ್ಕರಿಸಬೇಕು ಎಂದು ಸದಸ್ಯ ಎಚ್.ಬಿ ಮುರಾರಿ ಆಕ್ಷೇಪಣೆ ಸಲ್ಲಿಸಿದರು.
ಈ ಕುರಿತು ದಾಖಲಾತಿಯನ್ನು ಸಲ್ಲಿಸಿದರು. ಆದರೆ ಚುನಾವಣಾಧಿಕಾರಿ ರಜನೀಶ್ ಗೋಯಲ್ ಅವರು ನಾಮಪತ್ರ ಅಂಗೀಕಾರಗೊಂಡಿವೆ ಎಂದು ಅಂತಿಮವಾಗಿ ಘೋಷಿಸಿದರು.ತನ್ವೀರಾ ಬಷಿರುದ್ಧೀನ್ ಹಾಗೂ ಹರ್ಷಾ ಜಗನ್ನಾಥರಾಯ ಅವರಿಗೆ ತಲಾ 24 ಮತಗಳು ದೊರಕಿದವು. ಬಿಜೆಪಿಯ ಬಸಮ್ಮ ಕುಂಟೋಜಿ ಹಾಗೂ ಉಪಾಧ್ಯಕ್ಷ ಹುದ್ದೆಗೆ ಬಯಸಿದ್ದ ಕವಿತಾಳ ಕ್ಷೇತ್ರದ ಶಾಂತಮ್ಮ ಅವರಿಗೆ ತಲಾ 11 ಮತಗಳು ಬಿದ್ದವು.ಚುನಾವಣಾಧಿಕಾರಿಗಳು ತನ್ವೀರಾ ಬಷಿರುದ್ಧೀನ್, ಹರ್ಷಾ ಜಗನ್ನಾಥ ರಾಯ ಅವರ ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.