ADVERTISEMENT

`ಗ್ರಾಮೀಣ ಪ್ರತಿಭೆಗಳಿಗೆ ಕ್ರೀಡಾಕೂಟ ಸಹಕಾರಿ'

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:43 IST
Last Updated 4 ಸೆಪ್ಟೆಂಬರ್ 2013, 6:43 IST

ಮಾನ್ವಿ: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಲ್ಲಿ ಅಡಗಿರುವ  ಕ್ರೀಡಾ ಪ್ರತಿಭೆ ಗುರುತಿಸಲು ಕ್ರೀಡಾಕೂಟ ಸಹಕಾರಿಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.

ಮಂಗಳವಾರ ತಾಲ್ಲೂಕಿನ ಬಲ್ಲಟಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟವನ್ನು ಉದ್ಘಾಟಿಸಿ  ಮಾತನಾಡಿದರು.

ಮಸ್ಕಿ ಶಾಸಕ ಪ್ರತಾಪಗೌಡ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಹನುಮೇಶ ಮದ್ಲಾಪುರ, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವಿ.ಸ್ವಾಮಿ  ಮಾತನಾಡಿದರು.

ಜಿಪಂ ಸದಸ್ಯ ಗಂಗಣ್ಣ ಸಾಹುಕಾರ, ವಿಶ್ವನಾಥ ಪಾಟೀಲ್ ತೋರಣದಿನ್ನಿ ಹಾಗೂ ಕೆ.ಅಸ್ಲಂ ಪಾಷ ಸಿರವಾರ, ಎಪಿಎಂಸಿ ನಿರ್ದೇಶಕರಾದ ಜಿ.ಶಿವರಾಜ ನಾಯಕ ಹಾಗೂ ವೈ.ಬಸನಗೌಡ, ತಾಪಂ ಸದಸ್ಯ ದಾನನಗೌಡ ಸಿರವಾರ, ಅರ್ಜುನಪ್ಪ ಜಾನೇಕಲ್, ಅಯ್ಯನಗೌಡ ಜಂಬಲದಿನ್ನಿ, ಅಬ್ದುಲ್ ಗಫೂರ್‌ಸಾಬ, ಎಂ.ಈರಣ್ಣ, ಎ.ಬಾಲಸ್ವಾಮಿ ಕೊಡ್ಲಿ, ಮಹಾಂತೇಶ ಸ್ವಾಮಿ ರೌಡೂರು, ಖಾಲೀದ್ ಖಾದ್ರಿ, ನರಸಿಂಹ ನಾಯಕ, ಸಿ.ಗುರುನಾಥ, ಎಸ್‌ಡಿ ಎಂಸಿ ಉಪಾಧ್ಯಕ್ಷ ಎನ್.ಮಹಾದೇವಪ್ಪ, ಗ್ರಾಪಂ ಅಧ್ಯಕ್ಷೆ ಸಾಬಮ್ಮ ಶಿವರಾಜ ನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಸಣ್ಣ ಅಮರೇಶ, ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಅಲೀಷಾ, ಶಾಲೆಯ ಮುಖ್ಯಗುರು ಎ.ಕೋಟೆಪ್ಪ ಇನ್ನಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.